ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ, ಕಾಣೆಯಾಗಿರುವ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮಹಿಳೆಯನ್ನು ಒಂದು ವರ್ಷದೊಳಗೆ ಮದುವೆಯಾಗಬೇಕು ಎಂದು ಷರತ್ತು ವಿಧಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಇದಕ್ಕೆ ಕೋರ್ಟ್ ಷರತ್ತು ವಿಧಿಸಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮಹಿಳೆ ಪತ್ತೆಯಾದರೆ ಆಕೆಯನ್ನು ಮದುವೆಯಾಗಬೇಕು ಎಂದು ಷರತ್ತು ವಿಧಿಸಿದೆ. ಆದಾಗ್ಯೂ, ಒಂದು ವರ್ಷದ ಬಳಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪತ್ತೆಯಾಗದಿದ್ದಲ್ಲಿ ಆರೋಪಿಯು ಈ ಷರತ್ತಿಗೆ ಬದ್ಧವಾಗಿರಬೇಕಿಲ್ಲ ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಪೀಠವು ಅಕ್ಟೋಬರ್ 12 ರಂದು ನೀಡಿದ ಆದೇಶದಲ್ಲಿ ಹೇಳಿದೆ.
ಈ ಹಿಂದೆ ಆರೋಪಿ ಮತ್ತು 22 ವರ್ಷದ ಮಹಿಳೆ ಒಮ್ಮತದ ಸಂಬಂಧದಲ್ಲಿದ್ದರು. ಆದರೆ, ಮಹಿಳೆ ಗರ್ಭಿಣಿ ಎಂದು ತಿಳಿದ ನಂತರ ಆರೋಪಿಯು ಅವಳನ್ನು ದೂರ ಮಾಡಲು ಪ್ರಾರಂಭಿಸಿದ್ದಾನೆ. ಆಗ ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆ ಮಹಿಳೆ 2020 ರ ಫೆಬ್ರವರಿಯಲ್ಲಿ ಆರೋಪಿಯ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ನಂತರ ಆತನನ್ನು ಬಂಧಿಸಲಾಯಿತು. ತಮ್ಮ ದೂರಿನಲ್ಲಿ, ಅವರು 2018 ರಿಂದ ಸಂಬಂಧ ಹೊಂದಿದ್ದೆವು. ಈ ವಿಷಯ ನಮ್ಮ ಕುಟುಂಬಗಳಿಗೆ ತಿಳಿದಿತ್ತು. ಅವರು ಅದನ್ನು ವಿರೋಧಿಸಲಿಲ್ಲ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾಳೆ.
2019 ರಲ್ಲಿ ಮಹಿಳೆ ತಾನು ಗರ್ಭಿಣಿ ಎಂಬ ವಿಷಯವನ್ನು ಆರೋಪಿಗೆ ತಿಳಿಸಿದಳು. ಆದರೆ ಅವನು ಅವಳನ್ನು ದೂರ ಮಾಡಲು ಪ್ರಾರಂಭಿಸಿದನು. ಗರ್ಭಾವಸ್ಥೆಯ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಲು ಇಷ್ಟಪಡದ ಕಾರಣ ಮಹಿಳೆ ತನ್ನ ಮನೆಯನ್ನು ತೊರೆದಿದ್ದಾಳೆ. ಅದಾದ ನಂತ್ರ ಜನವರಿ 27, 2020 ರಂದು, ಅವರು ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು.
ಜನವರಿ 30 ರಂದು ಮಹಿಳೆ ಮಗುವನ್ನು ಒಂದು ಕಟ್ಟಡದ ಮುಂದೆ ಬಿಟ್ಟು ಹೋಗಿದ್ದಳು. ನಂತರ ಮಗುವನ್ನು ತ್ಯಜಿಸಿದ್ದಕ್ಕಾಗಿ ಆಕೆಯ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ʻಆಕೆಯ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನು ಅರಿತು ಮಹಿಳೆ ಬಹುಶಃ ನ್ಯಾಯದ ಹಾದಿಯಿಂದ ಪಲಾಯನ ಮಾಡಲು ಕಾರಣವಾಗಿರಬಹುದುʼ ಎಂದು ನ್ಯಾಯಮೂರ್ತಿ ಡಾಂಗ್ರೆ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಮಹಿಳೆಯನ್ನು ಮದುವೆಯಾಗಲು ಮತ್ತು ಮಗುವಿನ ಪಿತೃತ್ವವನ್ನು ಸ್ವೀಕರಿಸಲು ತಾನು ಸಿದ್ಧನಿದ್ದೇನೆ ಎಂದು ಆರೋಪಿಯು ಹೈಕೋರ್ಟ್ಗೆ ಭರವಸೆ ನೀಡಿದ್ದಾನೆ. ಆದರೆ, ಮಹಿಳೆ ಪತ್ತೆಯಾಗಿಲ್ಲ ಮತ್ತು ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗಿದ್ದ ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
“ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ಸಂತ್ರಸ್ತೆಯನ್ನು ಸ್ವಲ್ಪ ಸಮಯದೊಳಗೆ ಪತ್ತೆ ಹಚ್ಚಿದರೆ ಮತ್ತು ಒಂದು ವರ್ಷದ ಅವಧಿಯಲ್ಲಿ ಪತ್ತೆಯಾದ್ರೆ, ಆರೋಪಿಯು ಆಕೆಯೊಂದಿಗೆ ವಿವಾಹವಾಗುತ್ತಾನೆ. ಆದ್ರೆ ಅವಧಿ ಮೀರಿದ ಬಳಿಕ ಅಂದ್ರೆ, ಒಂದು ವರ್ಷ ಬಳಿಕ ಆರೋಪಿಯು ಈ ಷರತ್ತಿಗೆ ಬದ್ಧವಾಗಿರಬೇಕಿಲ್ಲ” ಎಂದು ಕೋರ್ಟ್ ಆದೇಶವು ತಿಳಿಸಿದೆ.
SHOCKING NEWS: ಟ್ಯೂಷನ್ ಮುಗಿಸಿ ಮನೆಗೆ ಹೋಗಲು ಆಟೋ ಹತ್ತಿದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣ ದಾಖಲು
BIGG NEWS: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಡಿ.ಕೆ ಶಿವಕುಮಾರ್ ಮತದಾನ