ದಾವಣಗೆರೆ : ಡೆಂಟಲ್ ಕಾಲೇಜು ರೋಡ್ನಲ್ಲಿರುವ ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆ ಹೋಟೆಲ್ ʻ ಗುರು ಕೊಟ್ಟುರೇಶ್ವರʼದಲ್ಲಿ ಮೋಹಕ ತಾರೆ ರಮ್ಯಾ ದಾವಣಗೆರೆ ಬೆಣ್ಣೆ ದೋಸೆ ಸವಿಸಿದ್ದಾರೆ. ಸೆಲ್ಪಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿನ್ನೆ ದಾವಣಗೆರೆಯಲ್ಲಿ ನಡೆದ ಹೆಡ್ ಬುಷ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅತಿಥಿಯಾಗಿ ಭಾಗಿಯಾಗಿದ್ದ ರಮ್ಯಾ ವೇದಿಕೆಯ ಮೇಲೆ ‘ನಾನು ದಾವಣಗೆರೆಗೆ ಬಂದಿದ್ದೇನೆ. ಇಲ್ಲಿನ ಫೇಮಸ್ ದೋಸೆಯನ್ನು ತಿಂದೇ ಹೋಗುತ್ತೇನೆ’ ಎಂದು ಅಭಿಮಾನಿಗಳಿಗೆ ಮಾತು ಕೊಟ್ಟಿದ್ದರು. ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ ರಮ್ಯಾ. ಇಂದು ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದಿದ್ದಾರೆ.
ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ಗೆ ಆಗಮಿಸಿದ ರಮ್ಯಾ, ಡಬಲ್ ಬೆಣ್ಣೆದೋಸೆಗೆ ಆರ್ಡರ್ ಮಾಡಿದ್ದಾರೆ. ರಮ್ಯಾ ಕಂಡು ಖುಷಿಗೊಂಡ ಹೋಟೆಲ್ ಮಾಲೀಕರು ರಮ್ಯಾಗೆ ಸ್ಪೆಷಲ್ ಎನ್ನುವಂತೆ ದೋಸೆ ಮಾಡಿಕೊಟ್ಟಿದ್ದಾರೆ. ರಮ್ಯಾ ಜೊತೆ ನಿರ್ಮಾಪಕ ಕಾರ್ತಿಕ್ ಗೌಡ ಕೂಡ ಆಗಮಿಸಿದ್ದರು. ಇಬ್ಬರೂ ಹೊಟ್ಟೆ ತುಂಬುವಷ್ಟು ಬೆಣ್ಣೆ ದೋಸೆ ಸವಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಮ್ಯಾ ಸಿನಿಮಾ ಸಂಬಂಧಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದರಲ್ಲೂ ಕೆ.ಆರ್.ಜಿ ಸಂಸ್ಥೆಯ ಜೊತೆ ಹಲವು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಹೀಗಾಗಿಯೇ ಕೆ.ಆರ್.ಜಿ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗಳ ಚಿತ್ರೀಕರಣ ಸ್ಥಳಕ್ಕೂ ರಮ್ಯಾ ಹೋಗುತ್ತಿದ್ದಾರೆ. ಹೊಯ್ಸಳ ಸಿನಿಮಾ ಕೆ.ಆರ್.ಜಿ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿ ಬರುತ್ತಿದೆ.ಡಾಲಿ ಧನಂಜಯ್ನಿರ್ಮಾಣ ಮತ್ತು ನಾಯಕನಾಗಿ ನಟಿಸುತ್ತಿರುವ ಹೆಡ್ ಬುಷ್ ಸಿನಿಮಾಗೂ ರಮ್ಯಾ ಅನೇಕ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅದರ ಭಾಗವಾಗಿ ದಾವಣಗೆರೆಯಪ್ರಿ ಇವೆಂಟ್ ರಿಲೀಸ್ ಕಾರ್ಯಕ್ರಮಕ್ಕೂ ಅವರು ಹಾಜರಾಗಿದ್ದಾರೆ. ನಿನ್ನೆ ಕಾರ್ಯಕ್ರಮ ಮುಗಿಸಿ, ಇವತ್ತು ದೋಸೆ ತಿಂದು ಬೆಂಗಳೂರಿನತ್ತ ಪ್ರವಾಸ ಬೆಳೆಸಿದ್ದಾರೆ.