ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಪ್ರವಾಸಿಗರಿಗೆ ಕೆಎಸ್ ಆರ್ ಟಿಸಿ (KSRTC) ಸಿಹಿಸುದ್ದಿ ನೀಡಿದ್ದು, ದೀಪಾವಳಿ ಹಬ್ಬಕ್ಕೆ ವಿಶೇಷ ಟೂರ್ ಘೋಷಣೆ ಮಾಡಲಾಗಿದೆ.
ಮಂಗಳೂರು ಕೆಎಸ್ ಆರ್ ಟಿಸಿ ವಿಭಾಗದಿಂದ ದೀಪಾವಳಿ ಹಬ್ಬಕ್ಕೆ ವಿಶೇಷ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ಪ್ಯಾಕೇಜ್ ಟೂರ್ ಇದಾಗಿದ್ದು, ಕೆಎಸ್ ಆರ್ ಟಿಸಿ ಪ್ಯಾಕೇಜ್ ಟೂರ್ ಅಡಿಯಲ್ಲಿ 10 ಬಸ್ ಗಳು ಕಾರ್ಯಗಳು ನಿರ್ವಹಿಸಲಿವೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೀಪಾವಳಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೆಎಸ್ ಆರ್ ಟಿಸಿ ಚೇರ್ಮನ್ ಚಂದ್ರಪ್ಪ ತಿಳಿಸಿದ್ದಾರೆ.