ರಾಯಚೂರು: ನಗರದ ಶಕ್ತಿನಗರ ಬಳಿಯಿರುವ ಆರ್ಟಿಪಿಎಸ್ ಘಟಕದ ಕಾರ್ಮಿಕರೊಬ್ಬರು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕಟ್ಟಡದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ .
BIGG NEWS: ಡಿಸಿಗಳು ಸಮಯಪ್ರಜ್ಞೆತೆಯಿಂದ ಕಾರ್ಯನಿರ್ವಹಿಸಬೇಕು; ಸಿಎಂ ಬೊಮ್ಮಾಯಿ ಸೂಚನೆ
ಘಟಕದ ಚಿಮಣಿ ಏರಿದ ನಂತರ ಇನ್ ಸ್ಟಾಗ್ರಾಂದಲ್ಲಿ ಲೈವ್ ವಿಡಿಯೋ ಮಾಡಿದ ಅವರು, ಶೀಘ್ರದಲ್ಲೇ ಕನಿಷ್ಠ ವೇತನ ಜಾರಿ ಮಾಡಬೇಕು, ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಟ್ಟಡದ ಮೇಲೇರಿದ ಕಾರ್ಮಿಕನನ್ನು ಸಣ್ಣಸುಗುರಪ್ಪ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸುತ್ತಿರುವ ವಿಷಯ ತಿಳಿದ ತಕ್ಷಣ ಸಾವಿರಾರು ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.