ಪಶ್ಚಿಮ ಬಂಗಾಳ: ವ್ಯಕ್ತಿಯೊಬ್ಬ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನೊಬ್ಬನನ್ನು ಹೊರಕ್ಕೆ ತಳ್ಳಿದ್ದು, ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಘಟನೆಯ ದೃಶ್ಯಾವಳಿ ಇದೀಗ ವೈರಲ್ ಅಗುತ್ತಿದೆ. ವಿಡಿಯೋದಲ್ಲಿ, ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಒಬ್ಬ ಯುವಕ ಹಾಗೂ ಮತ್ತೊಬ್ಬ ವ್ಯಕ್ತಿಯ ನಡುವೆ ಸಣ್ಣ ಜಗಳವಾಗುತ್ತದೆ. ಇದು ಹೀಗೆ ಮುಂದುವರೆದಿದ್ದು, ಕೋಪಗೊಂಡ ವ್ಯಕ್ತಿ ಯುವಕನನ್ನು ರೈಲಿನ ಬಾಗಿಲಿನ ಮೂಲಕ ಹೊರಗೆ ತಳ್ಳುವುದನ್ನು ನೋಡಬಹುದು.
#MamataBanerjee #NarendraModi#AmitShah
Howrah to malda intercity Express at yesterday 7:57 pic.twitter.com/hv64rfy6WS— Sandeepkumar (@sandeeplahoti29) October 16, 2022
ರೈಲಿನಿಂದ ಹೊರಗೆ ಬಿದ್ದ ಯುವಕ ಗಾಯಗೊಂಡಿದ್ದಾನೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧ ಯುವಕನನ್ನು ಹೊರಗೆ ತಳ್ಳಲ್ಪಟ್ಟ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇನ್ನು ಕೆಲವರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಶಂಕಿಸಿದ್ದಾರೆ. ಶನಿವಾರ ರಾತ್ರಿ ತಾರಾಪಿತ್ ರಸ್ತೆ ಮತ್ತು ರಾಮ್ಪುರಹತ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.
ಸಹ ಪ್ರಯಾಣಿಕನ ಅನುಚಿತ ವರ್ತನೆಯಿಂದ ಆತನನ್ನು ರೈಲಿನಿಂದ ಹೊರಹಾಕಲಾಯಿತು ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.
BIG NEWS : ರಷ್ಯಾ-ಉಕ್ರೇನ್ ಸಂಘರ್ಷವು 4 ಮಿಲಿಯನ್ ಮಕ್ಕಳನ್ನು ಬಡತನದ ಕೂಪಕ್ಕೆ ತಳ್ಳಿದೆ: UNICEF
BIGG NEWS: ಓಲಾ, ಉಬರ್, ರ್ಯಾಪಿಡೋ ಆಟೋಗಳು ಶೇ.10ರಷ್ಟು ಹೆಚ್ಚುವರಿ ಶುಲ್ಕ ಮತ್ತು GST ವಿಧಿಸಬಹುದು: ಹೈಕೋರ್ಟ್