ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಧರ್ಮ ದಂಗಲ್ ಶುರುವಾಗಿದ್ದು, ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಹಿಂದೂ ಸಂಘಟನೆಗಳು ಕರೆ ಕೊಟ್ಟಿವೆ.
BIG NEWS : ರಷ್ಯಾ-ಉಕ್ರೇನ್ ಸಂಘರ್ಷವು 4 ಮಿಲಿಯನ್ ಮಕ್ಕಳನ್ನು ಬಡತನದ ಕೂಪಕ್ಕೆ ತಳ್ಳಿದೆ: UNICEF
ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿರುವ ಹಿಂದೂ ಸಂಘಟನೆಗಳು ಪ್ರತಿ ಜಿಲ್ಲೆಗಳಲ್ಲೂ ಅಭಿಯಾನ ನಡೆಸಲು ಮುಂದಾಗಿವೆ. ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಹಿಂದೂ ಸಂಘಟನೆಗಳು ಕರೆ ಕೊಟ್ಟಿವೆ.
ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಖರೀದಿಸದಂತೆ, ಕರಪತ್ರಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತೇವೆ. ನಮ್ಮ ಅಭಿಯಾನ ರಾಜ್ಯಾದ್ಯಾಂತ ನಡೆಯಲಿದೆ ಎಂದು ಹಿಂದೂ ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ಹೇಳಿದ್ದಾರೆ.