ಬೆಂಗಳೂರು: ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿಗಳು ರೊಚ್ಚಿಗೆದಿದ್ದಾರೆ. ಈ ಬಗ್ಗೆ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ಸಲ್ಲಿಸಿದ್ದಾರೆ.
BIGG NEWS: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ; ಕೆಆರ್ ಎಸ್ ಡ್ಯಾಂ ಒಳಹರಿವು ಮತ್ತೆ ಹೆಚ್ಚಳ
25ಕ್ಕೂ ಹೆಚ್ಚು ಎಫ್ಡಿಎ, ಎಸ್ಡಿಎಗಳಿಂದ ಎಡಿಜಿಪಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್ 3ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನ ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಸಂಜೆ 6 ರ ನಂತರ ಕೆಲಸ ಶುರುಮಾಡಿ ರಾತ್ರಿ 3ಕ್ಕೆ ಮುಗಿಸ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗ್ತಿಲ್ಲ. ನಿಶಾ ಜೇಮ್ಸ್ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ ಎಂದು ಸಿಬ್ಬಂದಿ ನೀಡಿದ್ದ ದೂರಿನ ಪ್ರತಿ ಈಗ ವೈರಲ್ ಆಗಿದೆ.
BIGG NEWS: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ; ಕೆಆರ್ ಎಸ್ ಡ್ಯಾಂ ಒಳಹರಿವು ಮತ್ತೆ ಹೆಚ್ಚಳ
ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನುಬಾಹಿರವಾಗಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ.ನಿಶಾ ಜೇಮ್ಸ್ ಅವರ ನಡೆಯಿಂದ ಬೇಸತ್ತ 25 ಸಿಬ್ಬಂದಿಗೆ ವೇತನ ಬಡ್ತಿಯನ್ನ ತಡೆ ಹಿಡಿದಿದ್ದಾರೆ.ಮಹಿಳಾ ಟೈಪಿಸ್ಟ್ ತಾನು ಗರ್ಭಿಣಿ ಎಂದು ತಿಳಿಸಿದ್ರು ಕಚೇರಿಯಲ್ಲಿ 9 ಘಂಟೆಗೂ ಹೆಚ್ಚು ಕಾಲ ಕಾಯುವಂತೆ ತಿಳಿಸಿದ್ರು. ಇದರಿಂದ ಗರ್ಭಿಣಿ ಟೈಪಿಸ್ಟ್ ಸಿಬ್ಬಂದಿಗೆ ಮಾನಸಿಕ ಹಿಂಸೆಯಾಗಿ ಗರ್ಭಪಾತವಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ದೂರು ನೀಡಿದ್ದರು.