ಮಂಡ್ಯ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದೆ. ಹಿನ್ನೆಲೆಯಲ್ಲಿ ಹಳ್ಳ, ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಇದೀಗ ಕೆಆರ್ ಎಸ್ ಡ್ಯಾಂ ಕೂಡ ಒಳಹರಿವಿನ ಪ್ರಮಾಣದಲ್ಲಿ 54,311 ಕ್ಯೂಸೆಕ್ ನೀರು ಏರಿಕೆಯಾಗಿದೆ.
BIGG NEWS: ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನೋಟಿಸ್ ಜಾರಿ; ಅರುಣ್ ಸಿಂಗ್
ಕಳೆದೆರಡು ದಿನಗಳಿಂದ ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮವಾದ ಮಳೆಯಾಗುತ್ತಿರುವ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಒಳ ಹರಿವು ಏರಿಕೆಯಾಗುತ್ತಿದ್ದಂತೆ ಹೊರ ಹರಿವಿನ ಪ್ರಮಾಣವನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಡ್ಯಾಂ ಸಂಪೂರ್ಣ ಭರ್ತಿಯಾಗಿರುವ ಕಾರಣ ಡ್ಯಾಂನಿಂದ ನದಿಗೆ 56,624 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
BIGG NEWS: ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನೋಟಿಸ್ ಜಾರಿ; ಅರುಣ್ ಸಿಂಗ್
124.80 ಅಡಿ ಗರಿಷ್ಟ ಸಾಮರ್ಥ್ಯವಿರುವ ಕೆಆರ್ಎಸ್ ಡ್ಯಾಂ ಸದ್ಯ 124.70 ಅಡಿಯಷ್ಟು ಭರ್ತಿಯಾಗಿದೆ. ಡ್ಯಾಂಗೆ 54,311 ಕ್ಯೂಸೆಕ್ ಒಳಹರಿವು ಬರುತ್ತಿದ್ದರೆ, 56,624 ಕ್ಯೂಸೆಕ್ ನೀರು ಡ್ಯಾಂನಿಂದ ನದಿಗೆ ಹೋಗುತ್ತಿದೆ. ಕೆಆರ್ಎಸ್ ಡ್ಯಾಂ 49.475 ಟಿಎಂಸಿ ನೀರಿನ ಸಾಂದ್ರತೆ ಹೊಂದಿದ್ದು, ಸದ್ಯ 49.312 ಟಿಎಂಸಿ ಭರ್ತಿಯಾಗಿದೆ.