ಬೆಂಗಳೂರು : ವಿದ್ಯುತ್ ಗ್ರಾಹಕರು ( Electricity Consumer ) ಮೊದಲು ಹಣ ಪಾವತಿಸಿ ಬಳಿಕ ವಿದ್ಯುತ್ ಬಳಸುವಂತೆ ಮಾಡಲು ರಾಜ್ಯದಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ( Prepaid Smart Meter ) ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ( Department of Energy ) ಸಿದ್ದತೆ ನಡೆಸಿದ್ದು, ಶೀಘ್ರವೇ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಚಾಲನೆ ನೀಡಲಿದೆ.
ರಾಜ್ಯದ ಎಲ್ಲಾ ಎಸ್ಕಾಂ ವ್ಯಾಪ್ತಿಯ್ಲೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ನಿರ್ದೇಶನ ನೀಡಿದೆ. ಈ ಕುರಿತು ರಾಜ್ಯಕ್ಕೆ 2021 ರ ಜುಲೈ 22 ರಂದು ಪತ್ರ ಬರೆದಿದ್ದ ಕೇಂದ್ರ ಇಂಧನ ಸಚಿವಾಲಯ 2023 ರ ಡಿಸೆಂಬರ್ ನೊಳಗೆ ಪ್ರಿಪೇಯ್ಡ್ ಮೀಟರ್ ಅಳವಡಿಸಬೇಕು ಎಂದು ಸೂಚನೆ ನೀಡಿದೆ.
ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಿದರೆ ಗ್ರಾಹಕರು ಪ್ರತಿ ಸಂಪರ್ಕಕ್ಕೂ ಮೊದಲೇ ನಿರ್ದಿಷ್ಟ ಹಣ ಪಾವತಿಸದರಷ್ಟೇ ವಿದ್ಯುತ್ ಸರಬರಾಜಾಗಲಿದೆ. ಪ್ರತಿ ತಿಂಗಳೂ ಈ ರೀತಿ ಮೊದಲೇ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ.
ಈ ಬಗ್ಗೆ ಎಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ವಿದ್ಯುತ್ ಸೋರಿಕೆಯನ್ನು ತಡೆಗಟ್ಟೋದಕ್ಕೆ, ಆದಾಯ ಸೋರಿಕೆಯನ್ನು ತಡೆಗಟ್ಟೋದಕ್ಕಾಗಿ ಕೇಂದ್ರ ಇಂಧನ ಇಲಾಖೆಯು ರೀವ್ಯಾಂಪ್ಡ್ ಡಿಸ್ಟ್ರೀಬ್ಯೂಷನ್ ಸೆಕ್ಟರ್ ಸ್ಕೀಮ್ ಹೆಸರಿನಲ್ಲಿ ಈ ಯೋಜನೆ ರೂಪಿಸಿದೆ ಎಂದಿದ್ದಾರೆ.
ಇನ್ನೂ ಅಗ್ರಿಗೇಟ್ ಟೆಕ್ನಿಕಲ್ ಆಂಡ್ ಕಮರ್ಷಿಯಲ್ ಲಾಸ್ ನ ಶೇ.12-15ರಷ್ಟು ಕಡಿಮೆ ಮಾಡಲು ಹಾಗೂ 2024-25ರೊಳಗೆ ಶೂನ್ಯಕ್ಕೆ ಈ ಪ್ರಮಾಣ ತರೋದಕ್ಕೆ ಪ್ರಿಪೆಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ ಎಂಬುದಾಗಿಯೂ ಹೇಳಿದ್ದಾರೆ.