ಇಸ್ತಾನ್ಬುಲ್: ಟರ್ಕಿಯ ಇನ್ಸ್ತಾನ್ಬುಲ್ನಲ್ಲಿರುವ 24 ಅಂತಸ್ತಿನ ಕಟ್ಟಡದಲ್ಲಿ ಶನಿವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಭಯಾನಕ ದೃಶ್ಯಾವಳಿಗಳು ವೈರಲ್ ಆಗುತ್ತಿವೆ.
ವಿಡಿಯೋದಲ್ಲಿ 24 ಅಂತಸ್ತಿನ ಕಟ್ಟಡದೊಳಗೆ ಬೆಂಕಿ ಧಗಧಗಿಸುತ್ತದೆ. ಬೃಹತ್ ಟವರ್ ಬ್ಲಾಕ್ನ ಎಲ್ಲಾ ಮಹಡಿಗಳ ಮೂಲಕ ಜ್ವಾಲೆ ಹೊರ ಬರುತ್ತಿರುವುದನ್ನು ನೋಡಬಹುದು.
#Turkey: Skyscraper on fire in #Istanbul. pic.twitter.com/qa15Y4ZTfs
— Igor Sushko (@igorsushko) October 15, 2022
ಇಸ್ತಾನ್ಬುಲ್ನ ಕಡಿಕೋಯ್ ಜಿಲ್ಲೆಯ ಫಿಕಿರ್ಟೆಪೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಂಕಿ ಕೆಳ ಮಹಡಿಯಲ್ಲಿ ಪ್ರಾರಂಭವಾಗಿದ್ದು, ಕಟ್ಟಡದ ಮೇಲಿನ ಮಹಡಿಯವರೆಗೂ ತ್ವರಿತವಾಗಿ ವ್ಯಾಪಿಸಿದೆ.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದಲ್ಲ. ಟರ್ಕಿ ಪೊಲೀಸರು, ಆಂಬ್ಯುಲೆನ್ಸ್ ಸೇವೆ ಮತ್ತು ಅಗ್ನಿಶಾಮಕ ದಳಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
BIG NEWS : ʻಬಳ್ಳಾರಿ ಜೀನ್ಸ್ ಅನ್ನು ಜಾಗತಿಕ ಬ್ರಾಂಡ್ ಮಾಡುತ್ತೇನೆʼ: ರಾಹುಲ್ ಗಾಂಧಿ ಭರವಸೆ
Rain In Karnataka : ರಾಜ್ಯಾದ್ಯಂತ ಇಂದೂ ಮುಂದುವರೆಯಲಿದೆ ಮಳೆ ಅಬ್ಬರ : 18 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ