ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪೋಷಕರು ಬೇಡ ಸ್ನೇಹಿತನೇ ಬೇಕೆಂದು ಯುವತಿ ಮನೆ ಬಿಟ್ಟು ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನನಗೆ ಪೋಷಕರು ಬೇಡ ಸ್ನೇಹಿತನೇ ಬೇಕು ಎಂದ ಬಂದ ಯುವತಿಯನ್ನು ರಾಜ್ಯ ಮಹಿಳಾ ವಸತಿ ಗೃಹಕ್ಕೆ ಪೊಲೀಸರು ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ. ಇನ್ನೂ, ನನಗೆ ಮದುವೆ ವಯಸ್ಸಲ್ಲ, ಆದರೂ ಕೂಡ ಸ್ನೇಹಿತೆ ಬೇಕೆಂದು ಹಠ ಹಿಡಿದ ಯುವಕ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ
ಏನಿದು ಘಟನೆ
ಹರ್ಷಿತ್ ಎಂಬ (19) ಯುವಕ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ.ಯುವತಿ ಭೂಮಿಕಾ (18) (ಹೆಸರು ಬದಲಾಯಿಸಲಾಗಿದೆ) . ಈ ಇಬ್ಬರ ಸ್ನೇಹವನ್ನು ತಪ್ಪಾಗಿ ಭಾವಿಸಿದ ಪೋಷಕರು ಕಿರುಕುಳ ಆರೋಪ ಮಾಡಿದ್ದಾರೆ. ಆದರೆ ಸ್ನೇಹಿತೆ ಬೇಕೆಂದು ಹಠ ಹಿಡಿದ ಯುವಕ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. 15 ಪ್ಯಾರಾಸಿಟಮಲ್ ಮಾತ್ರೆ ಒಟ್ಟಿಗೆ ಸೇವಿಸಿದ ಹರ್ಷಿತ್ ಅಸ್ವಸ್ಥನಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನೂ, ಮಗಳನ್ನ ಕಳಿಸಿಕೊಡುವಂತೆ ಯುವತಿಯ ಪೋಷಕರು ಚಾಮರಾಜಪೇಟೆ ಠಾಣಾ ಮೆಟ್ಟಿಲೇರಿದ್ದು, ಪೊಲೀಸರ ಮುಂದೆ ಪೋಷಕರ ಜೊತೆ ಯುವತಿ ತೆರಳಲು ನಿರಾಕರಿಸಿದ್ದಾಳೆ. ಆದ್ದರಿಂದ ಚಾಮರಾಜಪೇಟೆ ಪೊಲೀಸರು ರಾಜ್ಯ ಮಹಿಳಾ ವಸತಿ ಗೃಹಕ್ಕೆ ಯುವತಿಯನ್ನು ಒಪ್ಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
Viral Video ; ಯುವತಿಗೆ ‘ಡೇಟಿಂಗ್’ ಸಲಹೆ ನೀಡಿದ ಅಮೆರಿಕ ಅಧ್ಯಕ್ಷ ; ‘ವಿಚಿತ್ರ’ ಡಬ್ ಮಾಡಿ ಕಾಲೇಳೆದ ನೆಟ್ಟಿಗರು