ಕಲಬುರಗಿ: ವೃದ್ಧೆಯನ್ನು ಜೀವಂತ ಇರುವಾಗಲೇ ಕಚ್ಚಿ ಕಚ್ಚಿ ತಿಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲಗಾಣಗಾಪುರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ಕಚ್ಚಿ ಕಚ್ಚಿ ತಿಂದು ಹಾಕಿವೆ ಎನ್ನಲಾಗಿದೆ. ದೇವಲಗಾಣಗಾಪುರ ಗಾಂಧಿನಗರದ ರಸ್ತೆ ಪಕ್ಕದಲ್ಲಿ ಅಪಘಾತಕ್ಕೆ ಈಡಾಗಿದ್ದರು ಈ ವೇಳೆಯಲ್ಲಿ ವೃದ್ದೆಯನ್ನು, ಆಟೋ ಚಾಲಕ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದನಂತೆ.
ಈ ವೇಳೆಯಲ್ಲಿ, ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ತಿಂದು ಹಾಕಿದ್ದು, ಸಾವಿಗೀಡಾದ ವೃದ್ಧೆಗೆ ದೇವಲಗಾಣಗಾಪುರ ಗ್ರಾಮಸ್ಥರು ಹಾಗೂ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ ಎನ್ನಲಾಗಿದೆ.