ಇಂಗ್ಲೆಂಡ್ : ಈಶಾನ್ಯವನ್ನು ಹೊರತುಪಡಿಸಿ ಕಳೆದ ವಾರದಲ್ಲಿ ಇಂಗ್ಲೆಂಡಿನ ಎಲ್ಲಾ ಪ್ರದೇಶಗಳಲ್ಲಿ ಸೋಂಕುಗಳು ಹೆಚ್ಚಾಗುವುದರೊಂದಿಗೆ ಯುಕೆಯಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸರ್ಕಾರಿ ತಜ್ಞರನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ.
ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ – ಬಿ.ಕೆ. ಹರಿಪ್ರಸಾದ್
ಬೇಸಿಗೆಯಲ್ಲಿ ಪ್ರಕರಣಗಳು ತುಲನಾತ್ಮಕವಾಗಿ ಕಡಿಮೆಯಾಗಿದ್ದು, ಇದೀಗ ಹೆಚ್ಚಾಗುತ್ತಿವೆ. 2 ರಿಂದ 16 ವರ್ಷ ವಯಸ್ಸಿನವರನ್ನು ಹೊರತುಪಡಿಸಿ ಎಲ್ಲಾ ವಯೋಮಾನದವರಲ್ಲಿ ಸೋಂಕುಗಳು ಹೆಚ್ಚುತ್ತಿವೆ ಎಂದು ವರದಿ ಹೇಳಿದೆ.
ಇತ್ತೀಚಿನ ವಾರದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಹಿರಿಯ ವಯಸ್ಸಿನ ಗುಂಪುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಭಾನುವಾರದ ಅಂತ್ಯದಲ್ಲಿ ಆಸ್ಪತ್ರೆಯ ದಾಖಲಾತಿಗಳು ಲಕ್ಷಕ್ಕೆ ಶೇ. 12.6 ರಷ್ಟು ಏರಿಕೆಯಾಗದೆ. ಆದರೆ ಕೋವಿಡ್ ಸಂಬಂಧಿತ ಸಾವುಗಳು ಮೊದಲಿಗಿಂತ ಕಡಿಮೆಯಾಗಿದೆ ಎನ್ನಲಾಗುತ್ತಿದೆ.
ONS ಕೋವಿಡ್ ಸಮೀಕ್ಷೆಯ ಉಪ ನಿರ್ದೇಶಕರಾದ ಸಾರಾ ಕ್ರಾಫ್ಟ್ಸ್, ಚಳಿಗಾಲ ಆರಂಭವಾಗುತ್ತಿದ್ದು, ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ನಿಕಟ ಮೇಲ್ವಿಚಾರಣೆಯ ಅವಶ್ಯಕತೆಯಿದೆ ಎಂದು ಹೇಳಿದರು.
ಇತ್ತೀಚಿನ ವಾರಗಳಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ನ ಈಶಾನ್ಯದಲ್ಲಿ ಕೋವಿಡ್ ಕೇಸ್ ಗಳ ಹೆಚ್ಚಳ ಕಂಡು ಬಂದಿದೆ. ಇತ್ತ ಯುನೈಟೆಡ್ ಕಿಂಗ್ಡಮ್ನ ಹೆಚ್ಚಿನ ಭಾಗಗಳಲ್ಲಿ ಸೋಂಕುಗಳು ಮತ್ತೆ ಏರಿದೆ ಎಂದು ಸಾರಾ ಕ್ರಾಫ್ಟ್ಸ್ ಹೇಳಿದ್ದಾರೆಂದು ಬಿಬಿಸಿ ಉಲ್ಲೇಖಿಸಿದೆ.
ಇಂಗ್ಲೆಂಡ್ನಲ್ಲಿ 35 ಜನರಲ್ಲಿ ಒಬ್ಬರು, ವೇಲ್ಸ್ನಲ್ಲಿ 40 ಜನರಲ್ಲಿ ಒಬ್ಬರು, ಉತ್ತರ ಐರ್ಲೆಂಡ್ನಲ್ಲಿ 40 ರಲ್ಲಿ ಒಬ್ಬರು ಮತ್ತು ಸ್ಕಾಟ್ಲ್ಯಾಂಡ್ನಲ್ಲಿ 50 ರಲ್ಲಿ ಒಬ್ಬರು ಸೋಂಕಿಗೆ ಒಳಗಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಅನುದಾನಿತ, ಖಾಸಗಿ ಕಾಲೇಜುಗಳಿಗೂ ಡಿಜಿಟಲೀಕರಣ ವಿಸ್ತರಣೆ – ಸಚಿವ ಅಶ್ವತ್ಥನಾರಾಯಣ ಘೋಷಣೆ