ದೆಹಲಿ: ದೆಹಲಿಯಲ್ಲಿ ನಿರಂತರವಾಗಿ ಸುರಿದ ಭಾರೀ ಸುರಿದ ಪರಿಣಾಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೆಹಲಿರುವ ನಿವಾಸಕ್ಕೆ ಗುರುವಾರ ಹಾವೊಂದು ಬಂದಿದೆ. ಐದು ಅಡಿ ಉದ್ದದ ಏಷ್ಯಾಟಿಕ್ ನೀರಿನಲ್ಲಿ ವಾಸಿಸುವ ಹಾವು ಶಾ ಮನೆಯಲ್ಲಿ ಪತ್ತೆಯಾಗದೆ.
ಈ ಹಾವುವನ್ನು ಭದ್ರತಾ ಸಿಬ್ಬಂದಿ ಗುರುತಿಸಿದ್ದು, ಇದರ ರಕ್ಷಣೆಗಾಗಿ ವನ್ಯಜೀವಿ ಎಸ್ಓಎಸ್ ಗೆ ಭದ್ರತಾ ಪಡೆಗಳು ಮಾಹಿತಿ ನೀಡಿದೆ. ಈ ಹಾವು ಯಾವುದೇ ತೊಂದರೆಯನ್ನು ಮಾಡಿಲ್ಲ ಮತ್ತು ಈ ಹಾವು ವಿಷಕಾರಿಯಲ್ಲ ಎಂದು ಹೇಳಿದ್ದಾರೆ.
ಶಾ ಅವರ ಭದ್ರತಾ ಸಿಬ್ಬಂದಿಯ ಕೊಠಡಿಯ ಬಳಿ ಈ ಹಾವು ಕಾಣಿಸಿಕೊಂಡಿದೆ. ಎನ್ಜಿಒದ ಇಬ್ಬರು ಸದಸ್ಯರ ತಂಡವು ಈ ಹಾವಿನ ರಕ್ಷಣೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಂಗಲೆಯ ಆವರಣದಲ್ಲಿ ಈ ಹಾವುವನ್ನು ಕಂಡು ಭದ್ರತಾ ಸಿಬ್ಬಂದಿ ಗಾಬರಿಗೊಂಡಿದ್ದಾರೆ.
ಗಾರ್ಡ್ ರೂಮ್ ಬಳಿ ಈ ಹಾವನ್ನು ಗಮನಿಸಿದ ಅವರು ತಕ್ಷಣವೇ ವನ್ಯಜೀವಿ SOSಗೆ ಕರೆ ಮಾಡಿದ್ದಾರೆ. ಹಾವಿಗೆ ಯಾವುದೇ ನೋವನ್ನು ಮಾಡದೇ SOS ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಹಾವು ಕಾವಲು ಕೊಠಡಿಯ ಸುತ್ತಲಿನ ಮರದ ಫಲಕಗಳ ನಡುವಿನ ಅಂತರದಲ್ಲಿ ತನ್ನ ದಾರಿ ಮಾಡಿಕೊಂಡಿದೆ, ಎಂದು ಸುದ್ದಿ ಸಂಸ್ಥೆ ವನ್ಯಜೀವಿ SOSನ್ನು ಉಲ್ಲೇಖಿಸಿ ವರದಿ ಮಾಡಿದೆ.