ವಿಜಯಪುರ: ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಸಾವನ್ನಪ್ಪಿದ್ದಾರೆ.
BIGG NEWS : ಪರಿಶಿಷ್ಟರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ `ವೇದ ಗಣಿತ’ ತರಬೇತಿ : ಆದೇಶ ಪತ್ರ ಹಿಂಪಡೆದ ರಾಜ್ಯ ಸರ್ಕಾರ
ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೋಣಸಗಿ ಗ್ರಾಮ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಕೊಂಡಿದ್ದರು. ಆಗ ಗುರುಪ್ಪ ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೆ ತಂದೆಯ ಮಾತು ಕೇಳದೆ ಆತುರದಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಅದಾದ ಬಳಿಕ ಮಲ್ಲು ಜಮಖಂಡಿ ಶವ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸಿಕ್ಕಿದೆ.
BIGG NEWS : ಪರಿಶಿಷ್ಟರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ `ವೇದ ಗಣಿತ’ ತರಬೇತಿ : ಆದೇಶ ಪತ್ರ ಹಿಂಪಡೆದ ರಾಜ್ಯ ಸರ್ಕಾರ
ಸೆಪ್ಟೆಂಬರ್ 22 ರಂದು ನಡೆದ ಘಟನೆ ಇಂದು ಶವ ಸಿಕ್ಕಿದ ಬಳಿಕ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಮಗಳ ಸಾವಿಗೆ ಕಾರಣವಾದ ಪ್ರೇಮಿ ಮಲ್ಲುವನ್ನು ಬಿಡಬಾರದು ಎಂದು ಕೈಕಾಲು ಕಟ್ಟಿ ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ.