ಗೋವಾ: ಬೆಳಗಾವಿ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ಗೋವಾದ ದೂದ್ ಸಾಗರನಲ್ಲಿ ಪ್ರವಾಹ ಹೆಚ್ಚಾಗಿದೆ. ದೂದ್ ಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದ ಹಲವು ಜನ ಪ್ರವಾಸಿಗರು ಜಲಪಾತದ ಬಳಿ ಸಿಲುಕಿದ ಘಟನೆ ನಡೆದಿದೆ.
ದೂದ್ ಸಾಗರ ಜಲಪಾತ ನೀರಿನ ಹರಿವು ದಿಢೀರ್ ಹೆಚ್ಚಾದ ಪರಿಣಾಮ ಜಲಪಾತದ ಬಳಿ ತೆರಳಲು ಹಾಕಿದ್ದ ಕಾಲು ಸಂಕಕೊಚ್ಚಿ ಹೋಗಿದೆ. ಇದರಿಂದಾಗಿ ಜಲಪಾತ ವೀಕ್ಷಣೆಗೆ ಜಲಪಾತದ ಬಳಿ ತೆರಳಿದ್ದ ಹಲವು ಜನ ಪ್ರವಾಸಿಗರು ವಾಪಸ್ಬರಲಾದೆ ಸಿಕ್ಕಿ ಹಾಕಿಕೊಂಡಿದ್ದರು.
ಬಳಿಕಾ ರಕ್ಷಣಾ ತಂಡ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಣೆ ಮಾಡಿದರು. ಅದೃಷ್ಟವಶಾತ್ ಜಲಪಾತದ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಕೂಡ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.