ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮಳೆಯಿಂದ ಆರೋಗ್ಯದ ಸ್ಥಿತಿ ಹಾಳಾಗುತ್ತಿದೆ. ಅದರಲ್ಲೂ ಮಕ್ಕಳಿಗೆ ಬೇಗನೇ ಜ್ವರ , ಶೀತ ಕಾಣಿಸಿಕೊಳ್ಳುತ್ತಿದೆ.ಇದೀಗ ಬ್ರೇನ್ ಮಲೇರಿಯಾ ಕಾಯಿಲೆಯ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ.
BIG NEWS: ಸಿದ್ದರಾಮಯ್ಯ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ; ನಳಿನ್ ಕುಮಾರ್ ಕಟೀಲ್ ಕಿಡಿ
ಮಕ್ಕಳಲ್ಲಿ ಇದರ ಪ್ರಮಾಣ ಹೆಚ್ಚು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾದರೆ ಈ ಮೆದುಳಿನ ಮಲೇರಿಯಾ ಎಂದರೇನು? ಈ ಮೆದುಳಿನ ಮಲೇರಿಯಾ ಲಕ್ಷಣಗಳು, ಈ ಕಾಯಿಲೆ ಬರದಂತೆ ತಡೆಗಟ್ಟುವ ಬಗೆ ಹೇಗೆ? ಸಾಮಾನ್ಯ ಮಲೇರಿಯಾಕ್ಕಿಂತ ಈ ಮೆದುಳಿನ ಮಲೇರಿಯಾ ಎಷ್ಟು ಭಿನ್ನ, ಮಕ್ಕಳ ಮೇಲೆ ಈ ಕಾಯಿಲೆ ಬೀರುವ ಪರಿಣಾಮಗಳೇನು? ಇಲ್ಲಿದೆ ನೋಡಿ ಮಾಹಿತಿ..
BIG NEWS: ಸಿದ್ದರಾಮಯ್ಯ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ; ನಳಿನ್ ಕುಮಾರ್ ಕಟೀಲ್ ಕಿಡಿ
ಮೆದುಳಿನ ಮಲೇರಿಯಾ ಹೇಗೆ ಹರಡುತ್ತದೆ?
ಈ ರೋಗವು ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ ಎಂಬುದು ತಿಳಿದಿರುವ ವಿಚಾರ. ಸೊಳ್ಳೆಯಿಂದ ಉಂಟಾಗುವ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿಯು ರಕ್ತದ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ ಇದರಿಂದ ದಿನ ಕಳೆದಂತೆ ದೇಹದಲ್ಲಿ ಬದಲಾವಣೆಗಳಾಗಿ ಮೆದುಳಿನ ಮಲೇರಿಯಾಕ್ಕೆ ದಾರಿ ಮಾಡಿಕೊಡುತ್ತದೆ.
ಮೆದುಳಿನ ಮಲೇರಿಯಾದ ಲಕ್ಷಣಗಳೇನು?
ಮಳೆಯಿಂದಾಗಿ ಮನೆಯ ಸುತ್ತಮುತ್ತ ನೀರು, ಕೊಳಕು ಸಂಗ್ರಹವಾಗುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ, ಅದರಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅತಿ ಜ್ವರದಿಂದ ದೇಹದಲ್ಲಿ ಸೆಳೆತ ಮತ್ತು ಚಳಿ ಹೆಚ್ಚಾಗುತ್ತದೆ. ಹಗಲಿನಲ್ಲಿ ಜ್ವರ ಕಡಿಮೆ ಆದರೆ, ರಾತ್ರಿಯಲ್ಲಿ ಜ್ವರದ ಜತೆಗೆ ಚಳಿ ಹೆಚ್ಚಾಗಲಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಮಕ್ಕಳಲ್ಲಿ ಚಳಿಯ ಜತೆಗೆ ಪ್ರಜ್ಞೆ ತಪ್ಪುವ ಅಪಾಯವೂ ಹೆಚ್ಚು ಇರುತ್ತದೆ.
BIG NEWS: ಸಿದ್ದರಾಮಯ್ಯ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ; ನಳಿನ್ ಕುಮಾರ್ ಕಟೀಲ್ ಕಿಡಿ
ಮೆದುಳಿನ ಮಲೇರಿಯಾ ತಡೆಗಟ್ಟುವ ಕ್ರಮಗಳು
ಮೆದುಳಿನ ಮಲೇರಿಯಾವನ್ನು ತಡೆಗಟ್ಟಲು ಮೊದಲನೆಯದಾಗಿ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
ಬಯಲಿನಲ್ಲಿ ಮಲಗಬೇಡಿ
ಸೊಳ್ಳೆ ಪರದೆ ಬಳಸಿ
ಮನೆಯ ಸುತ್ತ ನೀರು, ಕೊಳೆ ಸೇರದಂತೆ ನೋಡಿಕೊಳ್ಳಿ
ಶುದ್ಧ ನೀರು ಕುಡಿಯಿರಿ
ಸೊಳ್ಳೆಗಳು ಹೆಚ್ಚಿರುವ ಕಡೆ ಇರಬೇಡಿ