ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬ ದೇವಾಲಯದ ಬಾಗಿಲನ್ನು ಗುರುವಾರದಂದು ತೆರೆದಿದೆ. ಮೊದಲ ದಿನವೇ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ. ಇಂದಿನಿಂದ ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
BIGG NEWS: ಶಾಲೆಗಳಿಗೆ ದಸರಾ ರಜೆಯನ್ನು1 ತಿಂಗಳಿಗೆ ವಿಸ್ತರಿಸಿ; ಸರ್ಕಾರಕ್ಕೆ ಬಸವರಾಜ ಹೊರಟ್ಟಿ ಪತ್ರ
ಪ್ರತಿ ವರ್ಷದಂತೆ ಈ ವರ್ಷವು ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸಿ, ಜಿಲ್ಲಾಡಳಿತದ ಸಮ್ಮುಖದಲ್ಲಿ ಬಾಗಿಲು ತೆಗೆಯಲಾಯಿತು.ಮೊಟ್ಟ ಮೊದಲ ಬಾರಿಗೆ ಅಚ್ಚುಕಟ್ಟಾಗಿ ಈ ಬಾರಿ ದರ್ಶನದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಮಾಡಿತ್ತು. ಅಲ್ಲದೇ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅನೇಕ ಸೌಕರ್ಯಗಳನ್ನು ಒದಗಿಸಲಾಗಿದೆ.
BIGG NEWS: ಶಾಲೆಗಳಿಗೆ ದಸರಾ ರಜೆಯನ್ನು1 ತಿಂಗಳಿಗೆ ವಿಸ್ತರಿಸಿ; ಸರ್ಕಾರಕ್ಕೆ ಬಸವರಾಜ ಹೊರಟ್ಟಿ ಪತ್ರ
ಪ್ರತಿ ಬಾರಿಯೂ ಹಾಸನಾಂಬ ದರ್ಶನದ ಸಂದರ್ಭದಲ್ಲಿ ಮಳೆಯಾಗುವುದು ಪ್ರತೀತಿ. ಆದರೆ, ಮೊದಲ ಬಾರಿಗೆ ಪ್ರಾರಂಭದ ದಿನವೇ ವರುಣನ ಆರ್ಭಟ ಹೆಚ್ಚಾಗಿದ್ದರಿಂದ ರಾತ್ರಿ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ತೊಂದರೆ ಉಂಟಾಯಿತು. ರಾತ್ರಿ ಸುಮಾರು ಒಂಬತ್ತು ಗಂಟೆಗೆ ಆಗಮಿಸಿದ ವರುಣ, ಶುಕ್ರವಾರ ಮುಂಜಾನೆಯ ತನಕ ಸುರಿದಿದ್ದಾನೆ. ಹೀಗಾಗಿ ದರ್ಶನಕ್ಕೆ ತೊಂದರೆಯಾಗಿದ್ದು, ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಿದೆ.