ಬೆಂಗಳೂರು: ನಗರದಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸೊಸೆ ತನ್ನ ಅತ್ತೆಯನ್ನೇ ಕೊಲೆಗೈದಿರುವ ಘಟನೆ ನಡೆದಿದೆ.
ಆರೋಪಿ ಸುಗುಣ ತನ್ನ ಅತ್ತೆ ರಾಣಿ ಅವರನ್ನ ಹೊಡೆದು ಕೊಲೆ ಮಾಡಿದ್ದು, ಶ್ರೀರಾಮ್ಪುರ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.ರಾಣಿ ಅವರು ಎಲ್ಲ ಆಸ್ತಿಯನ್ನೂ ತನ್ನ ಮೂವರು ಗಂಡು ಮಕ್ಕಳಿಗೆ ಹಂಚಿದ್ದರು. ಒಂದು ಮನೆಯಲ್ಲಿ ತಾನು ವಾಸಿಸುತ್ತಿದ್ದರು. ಆ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ 2ನೇ ಪುತ್ರನ ಪತ್ನಿ ಸುಗುಣ ಪೀಡಿಸುತ್ತಲೇ ಇದ್ದಳು.
ಮನೆ ಕೊಡಲು ನಿರಾಕರಿಸಿದ್ದರಿಂದ ಸುಗುಣ ಹಲ್ಲೆಗೆ ಮುಂದಾಗಿದ್ದಾಳೆ. ಹಲ್ಲೆ ನಡೆಸುವಾಗ ಕತ್ತು ಮುರಿದು ಅತ್ತೆ ರಾಣಿ ಸಾವನ್ನಪ್ಪಿದ್ದಾರೆ.ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.