ವಾಷಿಂಗ್ಟನ್: ಉತ್ತರ ಕೆರೊಲಿನಾದ ರಾಜಧಾನಿ ರೇಲಿಯಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಘಟನೆಗೆ ಕಾರಣನಾದ ಶಂಕಿತನನ್ನು ಸೆರೆಹಿಡಿಯಲಾಗಿದೆ ಎಂದು ಆಗ್ನೇಯ ಯುಎಸ್ ನಗರದ ಅಧಿಕಾರಿಗಳು ತಿಳಿಸಿದ್ದಾರೆ.
ರೇಲಿ ಮೇಯರ್ ಮೇರಿ-ಆನ್ ಬಾಲ್ಡ್ವಿನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಇದು ರೇಲಿ ನಗರಕ್ಕೆ ದುಃಖ ಮತ್ತು ದುರಂತದ ದಿನವಾಗಿದೆ. ನಿನ್ನೆ ಸಂಜೆ 5:00 ಗಂಟೆಯ ನಂತರ ಅನೇಕ ಜನರ ಮೇಲೆ ಗುಂಡಿನ ದಾಳಿ ನಡೆದಿದ್ದು, ಆಫ್ ಡ್ಯೂಟಿ ರಾಲಿ ಪೋಲೀಸ್ ಅಧಿಕಾರಿ ಸೇರಿ 5 ಮಂದಿ ಸಾವನ್ನಪ್ಪಿದ್ದಾರೆ” ಎಂದು ಹೇಳಿದರು.
ಆರೋಪಿಯನ್ನು ರಾತ್ರಿ 9:30 ರ ನಂತರ ಬಂಧಿಸಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರೇಲಿ ಪೊಲೀಸ್ ಲೆಫ್ಟಿನೆಂಟ್ ಜೇಸನ್ ಬೊರ್ನಿಯೊ ಅನುಸರಣಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.