ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ವೇಳೆ ಎರಡು ಗುಂಡೇಟಿನಿಂದ ಗಾಯಗೊಂಡಿದ್ದ ಭಾರತೀಯ ಸೇನೆಯ ಶ್ವಾನ ಜೂಮ್(zoom) ಗುರುವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದೆ.
ಜೂಮ್ ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ರ ಸುಮಾರಿಗೆ ಕೊನೆಯುಸಿರೆಳೆದಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಭಾನುವಾರ ರಾತ್ರಿ ಅನಂತನಾಗ್ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಉಗ್ರರು ಅಡಗಿರುವ ಶಂಕಿತ ಮನೆಯೊಳಕ್ಕೆ ಸೋಮವಾರ ಬೆಳಗ್ಗೆ ಜೂಮ್ ಅನ್ನು ಕಳುಹಿಸಲಾಗಿತ್ತು.
ಉಗ್ರಗಾಮಿಗಳನ್ನು ಪತ್ತೆಹಚ್ಚಿದ ನಂತರ ಮತ್ತು ದಾಳಿ ವೇಳೆ ಜೂಮ್ ಗೆ ಎರಡು ಗುಂಡು ತಗುಲಿತ್ತು. ಆದ್ರೂ ಜೂಮ್ ಉಗ್ರರ ವಿರುದ್ಧ ಹೋರಾಡಿತು. ಆದ್ರೆ ಇದೀಗ ಜೂಮ್ ಕೊನೆಯುಸಿರೆಳೆದಿದೆ.
ಎನ್ಕೌಂಟರ್ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರು ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.
BIGG NEWS : ‘CET’ ಅಭ್ಯರ್ಥಿಗಳೇ ಗಮನಿಸಿ : ಇಂದಿನಿಂದ ಕೋರ್ಸ್ ಆಯ್ಕೆಗೆ ಅವಕಾಶ
OMG!: ನೂರಲ್ಲ, ಸಾವಿರವಲ್ಲ 62,46,364 ರೂ.ಗೆ ಸೇಲಾಯ್ತು 1880 ರ ದಶಕದ ಈʻಲೆವಿಸ್ ಜೀನ್ಸ್ʼ!