ಗಾಜಿಯಾಬಾದ್ (ಯುಪಿ): ಸಣ್ಣಪುಟ್ಟ ವಿಚಾರಕ್ಕೆ 35 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮಸೂರಿ ಪಟ್ಟಣದಲ್ಲಿ ನಡೆದಿದೆ.
ಬುಧವಾರ ರಾತ್ರಿ ಶಾದಾಬ್ ತನ್ನ ಐದು ವರ್ಷದ ಮಗಳು ಸಬಾ(5)ಳನ್ನು ಬೆಡ್ಶೀಟ್ ತರುವಂತೆ ಹೇಳಿದ್ದಾನೆ. ಆದ್ರೆ, ಅವಳು ಆಟದಲ್ಲಿ ನಿರತರಾಗಿದ್ದರಿಂದ ಅದನ್ನು ತಂದುಕೊಟ್ಟಿಲ್ಲ. ಇದ್ರಿಂದ ಕೋಪಗೊಂಡ ಶಾದಾಬ್ ತನ್ನ ಪತ್ನಿ ಶಬಾಬ್ನಾ ಅಲಿಯಾಸ್ ಶಬ್ಬೋವ್ ಅವರನ್ನು ಥಳಿಸಿದ್ದಾನೆ. ಇದನ್ನು ಪತ್ನಿ ವಿರೋಧಿಸಿದಾಗ ಆಕೆಗೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಹಿಳೆಯ ತಂದೆ ಅಲಿ ಹಸನ್ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
OMG!: ಮಹಿಳೆಯೊಬ್ಬರ ಕಣ್ಣಲ್ಲಿದ್ದ 23 ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹೊರತೆಗೆದ ವೈದ್ಯರು… Watch Video
Watch Video : ಗೆಳತಿಯೊಂದಿಗೆ ಶಾಪಿಂಗ್ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ!
BIGG NEWS : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಸರ್ಕಾರದಿಂದ ಶನಿವಾರ ‘ಬ್ಯಾಗ್ ಲೆಸ್ ಡೇ’ ಆಚರಣೆ