ಬೆಂಗಳೂರು: ರಾಜ್ಯದಲ್ಲಿ ಬಹುದೊಡ್ಡ ಹಗರಣವೆಂದೇ ಕರೆಯಲಾಗುವಂತ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿಯಿಂದ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇನ್ನೂ ಹಲವರ ವಿರುದ್ಧ ತನಿಖೆ ಮುಂದುವರೆಸಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಲಕ್ಕಪ್ಪ ಸೇರಿ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಚ್ ಎ ಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಲಕ್ಕಪ್ಪ ಬ್ಲೂಟೂತ್ ಹೆಡ್ ಫೋನ್ ಬಳಸಿ ಪರೀಕ್ಷೆ ಬರೆದಿದ್ದನು ಎಂಬ ಆರೋಪ ಕೇಳಿಬಂದಿದೆ. ಪಿಎಸ್ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಈತನ ಹೆಸರಿತ್ತು ಎನ್ನಲಾಗಿದೆ. ಸದ್ಯ, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ್ಗೊಳಪಡಿಸಲಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮ ಸಂಬಂಧ ಸಿಐಡಿ ಸಮರವನ್ನು ಮುಂದುವರೆಸಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವಂತ ಅಮೃತ್ ಪೌಲ್ ಸೇರಿದಂತೆ 7 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಈ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್ ಅನ್ನು ಸಿಐಡಿ ನೀಡಿದೆ. ಅಂದಹಾಗೇ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ 13 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ತನಿಖೆಯನ್ನು ಮುಂದುವರೆಸಿರುವಂತ ಸಿಐಡಿ ಹಲವರ ಬಂಧನಕ್ಕೂ ಬಲೆ ಬೀಸಿದೆ.
BIGG NEWS : ಪೋಷಕರಿಗೆ ಮುಖ್ಯ ಮಾಹಿತಿ : 1 ನೇ ತರಗತಿ ದಾಖಲಾತಿಗೆ 6 ವರ್ಷ ಪೂರ್ಣ ಕಡ್ಡಾಯ |B.C Nagesh
ಹಾಸನಾಂಬೆ ದೇವಾಲಯಕ್ಕೆ ಬರುವ ಭಕ್ತರಿಗೆ ಮುಖ್ಯ ಮಾಹಿತಿ : ಈ ಎರಡು ದಿನ ದೇವಿ ದರ್ಶನ ಭಾಗ್ಯ ಇಲ್ಲ |Hasanambe Temple