ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಯುವತಿ ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು. ಬುಧವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಯುವಕನೊಬ್ಬನು ಆಕೆಯನ್ನು ಚಿಕಿತ್ಸೆಗೆ ದಾಖಲಿಸಿದ್ದು, ಆಸ್ಪತ್ರೆಯ ಸಿಬ್ಬಂದಿ ಎಂಎಲ್ ಸಿ ಮಾಡುತ್ತೀವಿ ಎಂದು ಹೇಳುತ್ತಿದ್ದಂತೆ ಯುವತಿಯ ಮೊಬೈಲ್ ನೊಂದಿಗೆ ಆತ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಆತ ಯಾರೆಂಬುದು ತಿಳಿದು ಬಂದಿಲ್ಲ.
ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿರುವ 19 ವರ್ಷದ ತಬಸ್ಸುಮ್ ಸವದತ್ತಿ ಸಾವನ್ನಪ್ಪಿದ ಯುವತಿ. ಈಕೆ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿಗೆ ತೆರಳಿದ್ದ ಯುವತಿ ಕಾಲ್ ಸೆಂಟರ್ ಗೆ ಕೆಲಸಕ್ಕೆ ತಬಸ್ಸುಮ್ ಸೇರಿದ್ದರು. ಆದರೆ ಏಕಾಏಕಿ ನಿನ್ನೆ ತಬಸ್ಸುಮ್ಳನ್ನು ಅಪರಿಚಿತ ವ್ಯಕ್ತಿಯೊಬ್ಬರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.ಈ ವೇಳೆ ಎಂಎಲ್ಸಿ ಮಾಡ್ತೀವಿ ಅನ್ನುತ್ತಿದ್ದಂತೆ ಯುವತಿಯ ಮೊಬೈಲ್ ನೊಂದಿಗೆ ಅಪರಿಚಿತ ಯುವಕ ಎಸ್ಕೇಪ್ ಆಗಿದ್ದಾನೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ ವೇಳೆ ಯುವತಿ ನಿತ್ರಾಣ ಸ್ಥಿತಿಯಲ್ಲಿದ್ದರು. ಹೀಗಾಗಿ ತಬಸ್ಸುಮ್ ಳನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ತಬಸ್ಸುಮ್ ತಲೆಯ ಹಿಂಬದಿಗೆ ಗಾಯದ ಗುರುತು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಮೈಯಲ್ಲಿ ಸಿಗರೇಟ್ನಿಂದ ಸುಟ್ಟಿರುವ ಗಾಯದ ಗುರುತುಗಳಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸೊಳ್ಳೆಗಳ ಕಾಟಕ್ಕೆ ಹೇಳಿ ಗುಡ್ ಬೈ : ಕೀಟನಾಶಕ ಉಂಗುರ ತಯಾರಿಸಿದ ಜರ್ಮನ್ ವಿಜ್ಞಾನಿಗಳು