ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ಇಲ್ಲಿ ಕೇಳಿ. ಜಗತ್ತಿನ ಅತಿ ದೊಡ್ಡ ಪ್ರಯಾಣಿಕರ ವಿಮಾನ ಎ380 ನಾಳೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ವಿಶ್ವದ ಅತಿ ದೊಡ್ಡ ವಿಮಾನ ಎಂದೇ ಖ್ಯಾತಿ ಪಡೆದ ದುಬೈ ಮೂಲದ ಏರ್ಲೈನ್ ಎಮಿರೇಟ್ಸ್ A380 ಇನ್ನೇನು ಅಕ್ಟೋಬರ್ 14 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಂದಿಳಿಯಲಿದೆ. ಈ ಮೂಲಕ ಇನ್ನು ದುಬೈ-ಬೆಂಗಳೂರು ವಿಮಾನ ಸೇವೆ ಸಹ ಅರಂಭವಾಗಲಿದೆ.
ಈ ವಿಮಾನವು ದುಬೈನಿಂದ ಶುಕ್ರವಾರ ಬೆಳಗ್ಗೆ 10 ಕ್ಕೆ ಹೊರಟು ಮಧ್ಯಾಹ್ನ 3:40 ಕ್ಕೆ ಬೆಂಗಳೂರು ಬಂದಿಳಿಯಲಿದೆ . ಡಬಲ್ ಡೆಕ್ಕರ್ ವಿಮಾನವಾಗಿರುವ ಇದು 500 ಕ್ಕಿಂತಲೂ ಹೆಚ್ಚು ಜನರನ್ನು ಹೊರುವ ಸಾಮರ್ಥ್ಯವಿದೆ. ಈ ವಿಮಾನವು 510 ರಿಂದ 575 ಟನ್ಗಳಷ್ಟು ತೂಕವನ್ನು ಹೊಂದಿದೆ. ಇದರ ಉದ್ದ 72.7 ಮೀಟರ್ ಮತ್ತು ಎತ್ತರ 24.1 ಮೀಟರ್ ಆಗಿದೆ. A380 ವಿಮಾನವು ಬೋಯಿಂಗ್ 777 ವಿಮಾನಕ್ಕಿಂತ 45 % ರಷ್ಟು ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ.
ವಿಶ್ವದ ಅತಿ ದೊಡ್ಡ ವಿಮಾನವಾದ ಎಮಿರೇಟ್ಸ್ A380 ನಲ್ಲಿ ಒಟ್ಟು 118 ಯೂನಿಟ್ಗಳಿವೆ. ವಿಮಾನದ ಫಸ್ಟ್ ಕ್ಲಾಸಿನಲ್ಲಿ ಖಾಸಗಿ ಕೊಠಡಿಗಳು ಮತ್ತು ಶವರ್ ಸ್ಪಾಗಳಿಂದ ಹಿಡಿದು ಬಿಸಿನೆಸ್ ಕ್ಲಾಸ್ನಲ್ಲಿ ಫ್ಲಾಟ್-ಬೆಡ್ ಸೀಟ್ಗಳು ಇವೆ. ಈ ವಿಮಾನದಲ್ಲಿ ವೈರ್ಲೆಸ್ ಬ್ಲೂಟೂತ್ ಸಂಪರ್ಕ ಮತ್ತು ಎಕಾನಮಿ ಕ್ಲಾಸ್ನಲ್ಲಿ ಉತ್ತಮ ಬೆಳಕಿನ ವಿನ್ಯಾಸವನ್ನು ಈ ಎಮಿರೇಟ್ಸ್ A380 ವಿಮಾನ ಹೊಂದಿದೆ. ಈ ವಿಮಾನವು ಈಗಾಗಲೇ ಒಂದು ಮಿಲಿಯನ್ ಕೋಟಿ ಕಿ.ಮೀ. ಗಿಂತ ಹೆಚ್ಚು ಹಾರಾಟ ನಡೆಸಿದೆ.
ಇನ್ನೂ, ಈ ಐತಿಹಾಸಿಕ ಕ್ಷಣಕ್ಕೆ ನಾವು ಸಜ್ಜಾಗಿದ್ದೇವೆ, ಈ ವಿಮಾನವನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ13 ಜನರನ್ನು ಬಲಿ ಪಡೆದಿದ್ದ ‘ನರಭಕ್ಷಕ ಹುಲಿ’ ಕೊನೆಗೂ ಸೆರೆ
BIGG NEWS : ಹುಬ್ಬಳ್ಳಿಯಲ್ಲಿ ಘೋರ ದುರಂತ : ಮಾಂಸಗಂಡಿಯಲ್ಲಿಅನುಮಾನ್ಪದವಾಗಿ ವ್ಯಕ್ತಿ ಸಾವು