ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಸೌಂದರ್ಯಕ್ಕೆ ಹೆಚ್ಚು ಮಾನ್ಯತೆ ಕೊಡುತ್ತಾರೆ. ಹೀಗಾಗಿ ಸುಂದರವಾಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ.
ಹೆಚ್ಚು ಸಮಯ ಕುಳಿತಂತೇ ಇದ್ದಾಗ ನಿಮ್ಮ ಪಾದಗಳು ಊದಿಕೊಳ್ಳುತ್ತವೆಯೇ? ಈ ಸಮಸ್ಯೆಗಳಿಗೆ ಕಾರಣಗಳು ಇಲ್ಲಿವೆ ನೋಡಿ!
ಅದರಲ್ಲೂ ಮಹಿಳೆಯರು ಸುಂದರವಾಗಿ ಕಾಣಲು ಮಾಡದಿರುವ ಪ್ರಯತ್ನ ಇಲ್ಲ. ನಮ್ಮ ಮುಖ ಸುಂದರವಾಗಿ ಕಾಣುವಲ್ಲಿ ತುಟಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಮಹಿಳೆಯರು ದುಬಾರಿ ಬೆಲೆಯ ಲಿಪ್ಸ್ಟಿಕ್ ಬಳಸುತ್ತಾರೆ.ಲಿಪ್ಸ್ಟಿಕ್ ಮಾತ್ರವಲ್ಲದೆ ಇನ್ನಿತರ ಉತ್ಪನ್ನಗಳನ್ನು ಕೂಡಾ ಕೆಲವರು ತುಟಿಗಳನ್ನು ಕೆಂಪಾಗಿಸಲು ಮತ್ತು ಮೃದುವಾಗಿಡಲು ಬಳಸುತ್ತಾರೆ. ಹೀಗೆ ಮಾಡುವುದರಿಂದ ತುಟಿಗಳು ಕಪ್ಪಾಗುತ್ತವೆ.
ಹೆಚ್ಚು ಸಮಯ ಕುಳಿತಂತೇ ಇದ್ದಾಗ ನಿಮ್ಮ ಪಾದಗಳು ಊದಿಕೊಳ್ಳುತ್ತವೆಯೇ? ಈ ಸಮಸ್ಯೆಗಳಿಗೆ ಕಾರಣಗಳು ಇಲ್ಲಿವೆ ನೋಡಿ!
ಲಿಪ್ಸ್ಟಿಕನ್ನು ಅನೇಕ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತದೆ. ಪರಿಣಾಮವಾಗಿ, ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಹಾಗಾದರೆ ಲಿಪ್ ಸ್ಟಿಕ್ ಬಳಸದೆ ಸರಳವಾದ ಅಡುಗೆ ಮನೆಯಲ್ಲೇ ದೊರೆಯುವ ವಸ್ತುಗಳೊಂದಿಗೆ ತುಟಿಗಳನ್ನು ಗುಲಾಬಿ ಬಣ್ಣ ಬರುವಂತೆ ಹಾಗೂ ಆರೋಗ್ಯಕರವಾಗಿ ನೋಡಿಕೊಳ್ಳುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ನಿಂಬೆರಸ ಹಾಗೂ ಸಕ್ಕರೆ ಸ್ಕ್ರಬ್
ಸ್ವಲ್ಪ ನಿಂಬೆ ರಸ ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ ಸ್ಕ್ರಬ್ ತಯಾರಿಸಿ. ಇದನ್ನು ತುಟಿಗಳಿಗೆ ಹಚ್ಚಿ ತುಟಿಗಳನ್ನು 10-15 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ನಂತರ ನೀರಿನಿಂದ ಸ್ವಚ್ಛವಾಗಿ ತೊಳೆದರೆ ತುಟಿಯ ಸುತ್ತ ಕಪ್ಪು ಬಣ್ಣ ಹಾಗೂ ಸತ್ತ ಜೀವಕೋಶಗಳು ನಾಶವಾಗಿ ತುಟಿ ಗುಲಾಬಿ ಬಣ್ಣ ಕಾಣುತ್ತದೆ.
ಬೀಟ್ರೂಟ್
ಬೀಟ್ ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚಿಸುವುದು ಮಾತ್ರವಲ್ಲದೆ ತುಟಿಗಳನ್ನು ಕೆಂಪಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಬೀಟ್ ರೂಟ್ ತುಂಡುಗಳಿಂದ ವಾರಕ್ಕೆ 3-4 ಬಾರಿ ಐದು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ನಿರೀಕ್ಷೆಗಿಂತ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಆದರೆ ಅದಕ್ಕೂ ಮುನ್ನ ತುಟಿಗಳನ್ನು ಸ್ಕ್ರಬ್ ಮಾಡಬೇಕು.
ಹೆಚ್ಚು ಸಮಯ ಕುಳಿತಂತೇ ಇದ್ದಾಗ ನಿಮ್ಮ ಪಾದಗಳು ಊದಿಕೊಳ್ಳುತ್ತವೆಯೇ? ಈ ಸಮಸ್ಯೆಗಳಿಗೆ ಕಾರಣಗಳು ಇಲ್ಲಿವೆ ನೋಡಿ!
ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯು ತುಟಿಗಳನ್ನು ಆಕರ್ಷಕವಾಗಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯಿಂದ ತುಟಿಗಳನ್ನು ಮೃದುವಾಗಿ ಮಸಾಜ್ ಮಾಡಿ ಮತ್ತು ಬೆಳಗ್ಗೆ ತೊಳೆಯಿರಿ. ಜೊತೆಗೆ ಕೊತ್ತಂಬರಿ ಸೊಪ್ಪಿನ ರಸವನ್ನು ಪ್ರತಿದಿನ ತುಟಿಗಳ ಮೇಲೆ ಉಜ್ಜಿದರೆ ಕಪ್ಪು ಬಣ್ಣ ನಿವಾರಣೆಯಾಗಿ ಅವು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.