ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡದಲ್ಲಿ ಗಣಿಗಾರಿಕೆ ಮಾಫಿಯಾವನ್ನು ಬೆನ್ನಟ್ಟುವ ವೇಳೆ ಉತ್ತರ ಪ್ರದೇಶದ ಮೊರಾದಾಬಾದ್ನ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪೊಲೀಸರು ಮತ್ತು ಗಣಿಗಾರಿಕೆ ಮಾಫಿಯಾದವರ ನಡುವಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್(28) ಎಂದು ಗುರುತಿಸಲಾಗಿದೆ.
ಗಣಿಗಾರಿಕೆ ಮಾಫಿಯಾ ನಡೆಸುತ್ತಿದ್ದ ಜಫರ್ ಎಂಬಾತನನ್ನು ಬಂಧಿಸಲು ಮೊರಾದಾಬಾದ್ ಪೊಲೀಸ್ ತಂಡವು ಉತ್ತರಾಖಂಡದ ಜಸ್ಪುರ್ಗೆ ಬಂದಿತ್ತು. ಈ ವೇಳೆ ಪೊಲೀಸರು ಹಾಗೂ ಗಣಿಗಾರಿಕೆ ನಡೆಸುತ್ತಿದ್ದವರ ನಡುವೆ ಘರ್ಷಣೆ, ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಲಾಯಿತು ಮತ್ತು ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದ್ರೆ, ಇದೇ ಘಟನೆಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಬಿಜೆಪಿ ಮುಖಂಡನ ಪತ್ನಿ ಗುರುಪ್ರೀತ್ ಕೌರ್ಗೂ ಕೂಡ ಗುಂಡು ತಗುಲಿದೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುಪ್ರೀತ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳಾಗಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ಯುಪಿ ಪೊಲೀಸರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿದೆ. ಆರೋಪಿ ಜಾಫರ್ ಎಸ್ಕೇಪ್ ಆಗಿದ್ದಾನೆ.
BREAKING NEWS : ಸುಪ್ರೀಂಕೋರ್ಟ್ `ಹಿಜಾಬ್’ ತೀರ್ಪಿಗೆ ಕ್ಷಣಗಣನೆ : ಕರ್ನಾಟಕದಲ್ಲಿ ಹೈ ಅಲರ್ಟ್
BIGG NEWS: ಬೆಳಗಾವಿಯಲ್ಲಿ ಹಳ್ಳದ ಸೇತುವೆ ದಾಟುತ್ತಿದ್ದ ವೇಳೆ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ