ಕೆಎನ್ ಎನ್ ನ್ಯೂಸ್ ಡೆಸ್ಕ್ : ಭಾರತದಲ್ಲಿ ಅಕ್ಟೋಬರ್ 25ರಂದು, ಸೂರ್ಯಗ್ರಹಣ ಗೋಚರಿಸಲಿದೆ. ದೀಪಾವಳಿಯ ಅಮಾವಾಸ್ಯೆ ಖಂಡಗ್ರಾಸ ಸೂರ್ಯಗ್ರಹಣದ ದಿನವಾಗಿದೆ. ರಾಜ್ಯದಲ್ಲಿ ಯಾವ ಸಮಯಕ್ಕೆ ಗ್ರಹಣ ಕಾಣಿಸಿಕೊಳ್ಳಲಿದೆ? ಬೆಂಗಳೂರಿನಲ್ಲಿ ಗ್ರಹಣ ಸಮಯ ಯಾವುದು ಎಂಬ ಮಾಹಿತಿ ಇಲ್ಲಿದೆ.
ಯುರೋಪ್, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಗ್ರಹಣದ ಈ ವಿದ್ಯಮಾನವನ್ನು ಗಮನಿಸಬಹುದು. ಆದರೆ ಭಾರತದಲ್ಲಿ ಈಶಾನ್ಯ ಭಾರತದಿಂದ ಗ್ರಹಣವನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಖಗೋಳ ಭೌತಶಾಸ್ತ್ರಜ್ಞ ದೇಬಿ ಪ್ರಸಾದ್ ದುವಾರಿ ಹೇಳಿದ್ದಾರೆ.ಈ ಗ್ರಹಣವನ್ನು ಕೊಲ್ಕತ್ತಾದಿಂದ ಸ್ವಲ್ಪ ಸಮಯದವರೆಗೆ ವೀಕ್ಷಿಸಬಹುದು. ಆದರೆ ಭಾರತದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಸರಿಯಾಗಿ ವೀಕ್ಷಿಸಬಹುದು.ಅಕ್ಟೋಬರ್ 25ರಂದು, ಸೂರ್ಯ, ಚಂದ್ರ ಮತ್ತು ಭೂಮಿಯು ಬಹುತೇಕ ಒಂದೇ ಸಮತಲದಲ್ಲಿರುತ್ತದೆ.
ಇದರ ಪರಿಣಾಮವಾಗಿ ಚಂದ್ರನು ಸೂರ್ಯನನ್ನು ಭಾಗಶಃ ಆವರಿಸಿರುವಂತೆ ಗೋಚರಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣಕ್ಕೆ ಕಾರಣವಾಗುತ್ತದೆ” ಎಂದು ಹಿರಿಯ ಖಗೋಳ ಭೌತಶಾಸ್ತ್ರಜ್ಞರು ತಿಳಿಸಿದ್ದಾರೆ.ಭಾಗಶಃ ಸೂರ್ಯಗ್ರಹಣವು ಐಸ್ಲ್ಯಾಂಡ್ನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸುಮಾರು ಮಧ್ಯಾಹ್ನ 2:29 ಗಂಟೆಗೆ ಪ್ರಾರಂಭವಾಗುತ್ತದೆ. ರಷ್ಯಾದಲ್ಲಿ ಸಂಜೆ 4:30ರ ಸುಮಾರಿಗೆ ಕಂಡುಬರುತ್ತದೆ. ಇದು ಅರೇಬಿಯನ್ ಸಮುದ್ರದ ಮೇಲೆ ಸಂಜೆ ಸುಮಾರು 6:32 ಗಂಟೆಗೆ ಕೊನೆಗೊಳ್ಳುತ್ತದೆ.
ಭಾರತದಲ್ಲಿ ಸೂರ್ಯಗ್ರಹಣದ ಪ್ರಮುಖ ಅಂಶಗಳು
-ಕೇವಲ 4ರಷ್ಟು ಸೂರ್ಯನ ಭಾಗವನ್ನು ಮಾತ್ರ ಚಂದ್ರ ಆವರಿಸುತ್ತಾನೆ.
-ದೆಹಲಿ, ಮುಂಬೈ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಸೂರ್ಯಗ್ರಹಣ ಇರುತ್ತದೆ.
-ದೆಹಲಿಯಲ್ಲಿ, ಗ್ರಹಣವು ಸಂಜೆ 4.29 ಗಂಟೆಗಳಿಂದ 6.09 ಗಂಟೆಗಳವರೆಗೆ ವೀಕ್ಷಿಸಬಹುದು.
-ಬೆಂಗಳೂರಿನಲ್ಲಿ ಗ್ರಹಣವು 5:12 ಗಂಟೆಗೆ ಪ್ರಾರಂಭವಾಗಿ 5:55 ಗಂಟೆಗೆ ಕೊನೆಗೊಳ್ಳಲಿದೆ.