ಬೆಂಗಳೂರು: ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ನಳೀನ್ ಕುಮಾರ್ ಕಟೀಲ್ ‘ಯಂಕ-ಸೀನಾ-ನಾಣಿ’ಯಂತೆ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. #ಭಾರತಐಕ್ಯತಾಯಾತ್ರೆ ಈ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ. ಹಾಗಾಗಿಯೇ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ. ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ. ಯಂಕ-ಸೀನಾ-ನಾಣಿಗಳ ಜನಸಂಕಲ್ಪ ಯಾತ್ರೆಯ ಉದ್ದೇಶವೇನು? ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
1@BSYBJP, @BSBommai & @nalinkateel 'ಯಂಕ-ಸೀನಾ-ನಾಣಿ'ಯಂತೆ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. #ಭಾರತಐಕ್ಯತಾಯಾತ್ರೆ ಈ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ.
ಹಾಗಾಗಿಯೇ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ.
ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ.
ಯಂಕ-ಸೀನಾ-ನಾಣಿಗಳ ಜನಸಂಕಲ್ಪ ಯಾತ್ರೆಯ ಉದ್ದೇಶವೇನು?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 12, 2022
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, BJP ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಾಧನಾ ಸಮಾವೇಶ ಜನರಿಲ್ಲದೆ ತೋಪೆದ್ದು ಹೋಯಿತು. ಈಗ ಯಾವ ಮುಖ ಇಟ್ಟುಕೊಂಡು BJPಯವರು ಯಂಕ-ಸೀನಾ-ನಾಣಿ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ? ಇದು 40% ಕಮೀಷನ್ 50% ಪರ್ಸೆಂಟ್ ಏರಿಸುವ ಸಂಕಲ್ಪದ ಯಾತ್ರೆಯೇ? ಅಥವಾ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡುವ ಯಾತ್ರೆಯೇ? ಎಂದು ಪ್ರಶ್ನಿಸಿದ್ದಾರೆ.
2
BJP ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಾಧನಾ ಸಮಾವೇಶ ಜನರಿಲ್ಲದೆ ತೋಪೆದ್ದು ಹೋಯಿತು.
ಈಗ ಯಾವ ಮುಖ ಇಟ್ಟುಕೊಂಡು BJPಯವರು ಯಂಕ-ಸೀನಾ-ನಾಣಿ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ?ಇದು 40% ಕಮೀಷನ್ 50% ಪರ್ಸೆಂಟ್ ಏರಿಸುವ ಸಂಕಲ್ಪದ ಯಾತ್ರೆಯೇ?
ಅಥವಾ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡುವ ಯಾತ್ರೆಯೇ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 12, 2022
2018 ರ ಪ್ರಣಾಳಿಕೆಯಲ್ಲಿ BJP 600ಕ್ಕೂ ಹೆಚ್ಚು ಆಶ್ವಾಸನೆ ನೀಡಿ, ಅದನ್ನು ಈಡೇರಿಸುವ ಸಂಕಲ್ಪ ಮಾಡಿತ್ತು. ಆ ಸಂಕಲ್ಪ ಏನಾಯ್ತು? ಪ್ರಣಾಳಿಕೆ ಈಡೇರಿಸುವ ಸಂಕಲ್ಪ ಹಳ್ಳ ಹಿಡಿದಿದೆ. ಈಗ ಜನಸಂಕಲ್ಪ ಯಾತ್ರೆ ಎಂಬ ಹೊಸ ನಾಟಕ ಯಾಕೆ? ಇದು ಕಾಂಗ್ರೆಸ್ನ ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟು ಮಾಡುತ್ತಿರುವ ಯಾತ್ರೆಯಲ್ಲವೆ? ಎಂದಿದ್ದಾರೆ.
3
2018 ರ ಪ್ರಣಾಳಿಕೆಯಲ್ಲಿ BJP 600ಕ್ಕೂ ಹೆಚ್ಚು ಆಶ್ವಾಸನೆ ನೀಡಿ, ಅದನ್ನು ಈಡೇರಿಸುವ ಸಂಕಲ್ಪ ಮಾಡಿತ್ತು.
ಆ ಸಂಕಲ್ಪ ಏನಾಯ್ತು?
ಪ್ರಣಾಳಿಕೆ ಈಡೇರಿಸುವ ಸಂಕಲ್ಪ ಹಳ್ಳ ಹಿಡಿದಿದೆ.
ಈಗ ಜನಸಂಕಲ್ಪ ಯಾತ್ರೆ ಎಂಬ ಹೊಸ ನಾಟಕ ಯಾಕೆ?
ಇದು ಕಾಂಗ್ರೆಸ್ನ ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟು ಮಾಡುತ್ತಿರುವ ಯಾತ್ರೆಯಲ್ಲವೆ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 12, 2022