ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ತನ್ನ ಅಪ್ರಾಪ್ತ ಸಹಪಾಠಿಯನ್ನು ಮದುವೆಯಾದ ಆರೋಪದ ಮೇಲೆ ಗರ್ಭಿಣಿಯಾಗಿರುವ 20 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಕಾಣೆಯಾದಾಗ ಅಪ್ರಾಪ್ತನಾಗಿದ್ದ ಹದಿಹರೆಯದವನು ಹಿರಿಯ ವಿದ್ಯಾರ್ಥಿಯೊಂದಿಗೆ ವಾಸಿಸುತ್ತಿದ್ದನು. ಆತನನ್ನು(ತಮ್ಮ ಮಗನನ್ನು) ನಮಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತನಿಖೆ ಮುಂದುವರೆಸಿದ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ.
ಯುವತಿ ಇದೀಗ ಗರ್ಭಿಣಿಯಾಗಿದ್ದು, ಆಕೆಯ ವಿರುದ್ಧ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು. ಕೋರ್ಟ್ ಅವಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಸೇಲಂ ನಗರದ ಪೊಲೀಸ್ ಕಮಿಷನರ್ ನಜ್ಮುಲ್ ಹೋಡಾ ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ, ರಾಜ್ಯದ ಕಡಲೂರು ಜಿಲ್ಲೆಯಲ್ಲಿ 16 ವರ್ಷದ ಹುಡುಗಿಯನ್ನು ಮದುವೆಯಾಗಿದ್ದಕ್ಕಾಗಿ 17 ವರ್ಷದ ಹುಡುಗನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಸ್ ನಿಲ್ದಾಣದಲ್ಲಿ ಬಾಲಕಿಗೆ ಮಂಗಳಸೂತ್ರ ಹಾಕುವ ವಿಡಿಯೋ ವೈರಲ್ ಆದ ನಂತರ ಆತನ ಬಂಧನವಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕನನ್ನು ಅಬ್ಸರ್ವೇಶನ್ ಹೋಮ್ಗೆ ಕಳುಹಿಸಿದ್ದಾರೆ. ಬಾಲಕಿಯೊಂದಿಗೆ ಬಾಲಕ ಲೈಂಗಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಆರೋಪದ ಮೇಲೆ ಎಸ್ಸಿ/ಎಸ್ಟಿ ಕಾಯ್ದೆಯಡಿ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
BIGG NEWS: ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬೇಕಂತಲೇ ಬದಲಿಸಿದ್ದೇನೆ; ಪ್ರತಾಪ್ ಸಿಂಹ ಸಮರ್ಥನೆ