ಹರಿಯಾಣ : ರೋಹ್ಟಕ್ನಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಕ್ಕಳು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.ಸಿಲಿಂಡರ್ ಸ್ಫೋಟದಿಂದ ಮನೆಗೂ ಹಾನಿಯಾಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
Viral news : ತಮಿಳುನಾಡಿನ ಯುವಕನೊಬ್ಬ16 ವರ್ಷದ ಹುಡ್ಗಿಯನ್ನ ಬಸ್ಸ್ಟ್ಯಾಂಡ್ನಲ್ಲಿ ಮದುವೆಯಾದ Video | WATCH
ಘಟನೆ ಬಗ್ಗೆ ಶಿವಾಜಿ ಕಾಲೋನಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಶೇರ್ ಸಿಂಗ್ ಮಾತನಾಡಿ, “ರೋಹ್ಟಕ್ನ ಏಕ್ತಾ ಕಾಲೋನಿಯಲ್ಲಿ ಇಂದು ಬೆಳಿಗ್ಗೆ ಸಿಲಿಂಡರ್ ಸ್ಫೋಟದಲ್ಲಿ ವಿವಾಹಿತ ದಂಪತಿಗಳು ಮತ್ತು ಅವರ ಐದು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಟೆಂಡರ್ಗಳು ಮತ್ತು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ ಎಂದಿದ್ದಾರೆ.
Viral news : ತಮಿಳುನಾಡಿನ ಯುವಕನೊಬ್ಬ16 ವರ್ಷದ ಹುಡ್ಗಿಯನ್ನ ಬಸ್ಸ್ಟ್ಯಾಂಡ್ನಲ್ಲಿ ಮದುವೆಯಾದ Video | WATCH