ಪಾಟ್ನಾ: ಪೊಲೀಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ನ ಇಂಧನ ಟ್ಯಾಂಕ್ ಸ್ಫೋಟಗೊಂಡಿದ್ದು, ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಬಿಹಾರದ ಚಾಪ್ರಾ-ಸಿವಾನ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಡಿಯೋರಿಯಾ ಗ್ರಾಮದ ಬಳಿ ಬೈಕ್ನಲ್ಲಿ ಬಂದ ಬೈಕ್ ಸವಾರರು ಪೊಲೀಸ್ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಗುದ್ದಿದ್ದಾರೆ. ಈ ವೇಳೆ ಬಸ್ನಡಿ ಸಿಲುಕಿದ ಬೈಕ್ ಸವಾರನನ್ನು ಬಸ್ ಸ್ವಲ್ಪ ದೂರದವರೆಗೆ ಎಳೆದೊಯ್ದ ಪರಿಣಾಮ ಬಸ್ನ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೈಕ್ ಸವಾರ ಸಜೀವ ದಹನಗೊಂಡಿದ್ದಾನೆ.
ಅಪಘಾತದ ನಂತರ ಬಸ್ ಬೆಂಕಿಗೆ ಆಹುತಿಯಾಗಿದ್ದು, ಕೂಡಲೇ ಪೊಲೀಸ್ ಅಧಿಕಾರಿಗಳು ಬಸ್ನಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
छपरा-सीवान हाईवे पर आज सुबह पुलिस के जवानों को ले जा रही एक बस की चपेट में आने से तीन बाइक सवारों की मौत हो गई. हादसे के बाद बस के फ्यूल टैंक में विस्फोट होने से बस में भी आग लग गई.#Chapra pic.twitter.com/kNHrHR7FK4
— Kumar Abhishek (@active_abhi) October 12, 2022
ಸಿತಾಬ್ದಿಯಾರಾದಲ್ಲಿ ದಿವಂಗತ ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ 120 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಬಸ್ ಹಿಂತಿರುಗುತ್ತಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು.
BIGG NEWS : ಊಬರ್ , ಓಲಾ ಆಟೋಗಳಿಗೆ ಅನುಮತಿ ನೀಡಿಲ್ಲ : ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟನೆ