ಚೆನ್ನೈ: ಪಾಲಿಟೆಕ್ನಿಕ್ನಲ್ಲಿ ಓದುತ್ತಿರುವ 17 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿಯನ್ನು ತಮಿಳುನಾಡಿನ ಕಡಲೂರು ಜಿಲ್ಲೆಯ ಬಸ್ಸ್ಟಾಂಡ್ ನಲ್ಲಿ ನೋಡುಗರ ಸಮ್ಮುಖದಲ್ಲಿ ವಿವಾಹವಾದನು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತನಿಖೆ ಆರಂಭಿಸಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಡಲೂರು ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ
ಬಾಲ್ಯವಿವಾಹ ನಿಷೇಧ ಕಾಯಿದೆ, 2006ರ ಪ್ರಕಾರ ಪುರುಷನಿಗೆ 21 ವರ್ಷ ಮತ್ತು ಮಹಿಳೆಗೆ 18 ವರ್ಷ ವಯಸ್ಸಾಗಿರಬೇಕು. ಯಾವುದೇ ಬಾಲ್ಯವಿವಾಹವನ್ನು ನಡೆಸುವ ಅಥವಾ ಪ್ರೋತ್ಸಾಹಿಸುವವನು ಎರಡು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆಗೆ ಒಳಗಾಗುತ್ತಾನೆ 1 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾನೆ
ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಯಲ್ಲಿ ಕೌನ್ಸೆಲಿಂಗ್ ನೀಡಲಾಗಿದ್ದು, ಬಾಲಕನನ್ನು ಕಡಲೂರಿನ ಬಾಲಾಪರಾಧಿ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಘಟನೆಯ ವೀಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಬಾಲಾಜಿ ಗಣೇಶ್ ಎಂಬ ಮತ್ತೊಬ್ಬನನ್ನು ಕ ವಶದಲ್ಲಿದ್ದಾರೆ ಎಂದು ಡಲೂರು ಪೊಲೀಸರು ಮಾಹಿತಿ ನೀಡಿದ್ದಾರೆ.