ಬೆಂಗಳೂರು : ರಾಜ್ಯದಲ್ಲಿ ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ ಉನ್ನತ ಹಾಗೂ ಹಿರಿಯ ಶ್ರೇಣಿಯ 2 ಸಾವಿರ ಹುದ್ದೆಗಳನ್ನು ರದ್ದುಪಡಿಸಲು ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದೆ.
ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟದ ಉಸಮಿತಿಯು ಈ ನಿರ್ಣಯ ತೆಗೆದುಕೊಂಡಿದ್ದು, ಕೃಷಿ ಇಲಾಖೆಯಡಿ ಬರುವ ಮೈಸೂರು ತಂಬಾಕು ಕಂಪನಿ, ಕರ್ನಾಟಕ ಕೃಷಿ ಕೈಗಾರಿಕೆ ನಿಗಮ, ಕರ್ನಾಟಕ ಆಹಾರ ನಿಗಮ, ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲಿನ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳ ಹುದ್ದೆಗಳು, ಕೆಳಹಂತದ ಸಿಬ್ಬಂದಿ ಕೃಷಿ ಇಲಾಖೆಗೆ ಹಸ್ತಾಂತರಿಸುವ ಕುರಿತು ಶಿಫಾರಸು ಮಾಡಲಾಗಿದೆ.
BIGG NEWS : ರಾಜ್ಯದಲ್ಲಿ ಮತ್ತೆ ಕೈಕೊಟ್ಟ `108 ಆ್ಯಂಬುಲೆನ್ಸ್’ ಸೇವೆ : ಕರೆ ಮಾಡಿದ್ರೆ ಸ್ವೀಕರಿಸದ ಸಿಬ್ಬಂದಿ!
ಇನ್ನು ಬೆಂಗಳೂರು ಸುತ್ತಮುತ್ತಲಿನ ನೆಲಮಂಗಲ, ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ ಬೆಂಗಳೂರು ಏರ್ ಪೋರ್ಟ್ ಸೇರಿ 10 ಯೋಜನಾ ಪ್ರಾಧಿಕಾರಿಗಳ ರದ್ದು ಮಾಡಲಾಗಿದ್ದು, ಪ್ರತಿ ಜಿಲ್ಲೆಗೆ ಒಂದು ಯೋಜನಾ ಪ್ರಾಧಿಕಾರ ರಚನೆಗೆ ನಿರ್ಧರಿಸಲಾಗಿದೆ.