ನವನದೆಹಲಿ: ಇರಾನ್ನಲ್ಲಿ ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಸಾರ್ವಜನಿಕವಾಗಿ ಹಿಜಾಬ್ ಧರಿಸಿಲ್ಲವೆಂಬ ಕಾರಣಕ್ಕೆ ಇರಾನ್ನ 22 ವರ್ಷದ ಮಹ್ಸಾ ಅಮಿನಿ ಸಾವನ್ನಪ್ಪಿದ್ದರು. ಅಂದಿನಿಂದ ಇಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಇದೀಗ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ(Elnaaz Norouzi) ಅವರು ಈ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಎಲ್ನಾಜ್ ಧರಿಸಿದ ಒಂದೊಂದೇ ವಸ್ತ್ರವನ್ನು ತೆಗೆದು ಹಾಕಿ, ಅರೆಬೆತ್ತಲಾಗುವ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮಹಿಳೆಯರು ಯಾವ ರೀತಿಯ ಬಟ್ಟೆಯನ್ನು ಧರಿಸಬೇಕು ಎನ್ನುವ ಹಕ್ಕು ಬೇಕು ಎಂದು ಕೇಳುವ ಮೂಲಕ ಬೃಹತ್ ಪ್ರತಿಭಟನೆಗೆ ಸೇರಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
View this post on Instagram
BIGG NEWS : ರಾಜ್ಯದಲ್ಲಿ ಮತ್ತೆ ಕೈಕೊಟ್ಟ `108 ಆ್ಯಂಬುಲೆನ್ಸ್’ ಸೇವೆ : ಕರೆ ಮಾಡಿದ್ರೆ ಸ್ವೀಕರಿಸದ ಸಿಬ್ಬಂದಿ!
BIG NEWS : ʻಭಾರತವು ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆʼ: ಪ್ರಧಾನಿ ಮೋದಿ