ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳ ದರ್ಶನಕ್ಕೆ ಅನುಕೂಲವಾಗುವಂತೆ ಪ್ಯಾಕೇಜ್ ಟೂರ್ ರೂಪಿಸಲಾಗಿದೆ ಎಂದು ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಎಂ ಚಂದ್ರಪ್ಪ ತಿಳಿಸಿದರು.
ಪ್ಯಾಕೇಜ್ ಟೂರ್ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಂಗಳೂರು ವಿಭಾಗದ ಕೆ ಎಸ್ ಆರ್ ಟಿಸಿ ಯಿಂದ 5-10 ಬಸ್ಸುಗಳನ್ನು ಬಿಡಲಾಗುತ್ತಿದೆ. ಮಂದೆ ವೀಕೆಂಡ್ ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳ ದರ್ಶನಕ್ಕೆ ಅನುಕೂಲವಾಗುವಂತೆ ಪ್ಯಾಕೇಜ್ ಟೂರ್ ರೂಪಿಸಲಾಗಿದೆ ಎಂದರು.
ದಸರಾ ಸಂದರ್ಭದಲ್ಲಿ ಪ್ಯಾಕೇಜ್ ಟೂರ್ ಮಾಡಲಾಗಿತ್ತು, ಇದಕ್ಕೆ ಒಳ್ಳೆಯ ರೆಸ್ಪಾನ್ ಸಿಕ್ಕಿತ್ತು. ಈ ಹಿನ್ನೆಲೆ ದೀಪಾವಳಿ ಪ್ಯಾಕೇಜ್ ಟೂರ್ ಹಾಕಲು ಕೆ ಎಸ್ ಆರ್ ಟಿ ಸಿ ನಿರ್ಧರಿಸಿದೆ. ಸದ್ಯ 5 ರಿಂದ 10 ಬಸ್ ಬಿಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್ ಸೇವೆ ನೀಡಲಿದ್ದೇವೆ ಎಂದು ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಎಂ ಚಂದ್ರಪ್ಪ ತಿಳಿಸಿದರು.
ಅಕ್ಟೋಬರ್ 21 ರಿಂದ 27 ರವರೆಗೆ ದೀಪಾವಳಿ ಪ್ರವಾಸ ಪ್ಯಾಕೇಜ್ ಇರಲಿದ್ದು, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳನ್ನೊಳಗೊಂಡ ಪ್ರಮುಖ ದೇವಾಲಯಗಳು ಈ ಪ್ಯಾಕೇಜ್ ನಲ್ಲಿರಲಿದೆ. ಅದೇ ರೀತಿ ಕರ್ನಾಟಕ ರಸ್ತೆ ಸಾರಿಗೆ ನಿಗಮ 50 ವೋಲ್ವೋ ಬಸ್ ಸೇರಿದಂತೆ 650 ಹೊಸ ಬಸ್ ಗಳನ್ನು ಖರೀದಿಸುವ ಪ್ರಸ್ತಾಪವಿದೆ ಎಂದು ಮಾಹಿತಿ ನೀಡಿದ್ದಾರೆ.
ಜನಸಂಕಲ್ಪ ಯಾತ್ರೆ ನಿರಂತರವಾಗಿ ಡಿಸೆಂಬರ್ ವರೆಗೆ ನಡೆಯಲಿದೆ – ಸಿಎಂ ಬಸವರಾಜ ಬೊಮ್ಮಾಯಿ
80 ರ ವಸಂತಕ್ಕೆ ಕಾಲಿಟ್ಟ ಬಿಗ್ ಬಿ ‘ಅಮಿತಾಬ್ ಬಚ್ಚನ್’ : ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ