ರಾಯಚೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಇಂದಿನಿಂದ ಜನ ಸಂಕಲ್ಪ ಯಾತ್ರೆಯನ್ನು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಪರ್ಯಾಯವಾಗಿ ಆರಂಭಿಸಿದೆ. ಈ ಯಾತ್ರೆಯಲ್ಲಿ ಮಾತನಾಡಿರುವಂತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ಹಗರಣಗಳನ್ನು ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಯಚೂರಿನ ಗಿಲ್ಲೆಸುಗೂರಿನಲ್ಲಿ ನಡೆದಂತ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದಂತ ಅವರು, ಕಾಂಗ್ರೆಸ್ ನಾಯಕರ ವಿರುದ್ಧದ ಹಗರಣಗಳನ್ನು ತನಿಖೆ ಮಾಡಿಸಿ, ನಿಮ್ಮನ್ನು ಎಲ್ಲಿಗೆ ನಿಲ್ಲಿಸಬೇಕೋ ಅಲ್ಲಿಗೆ ನಿಲ್ಲಿಸುತ್ತೇವೆ ಎಂದು ಗುಡುಗಿದರು.
BREAKING NEWS: ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ – ಸಾಗರ್ ಅಪೊಲೋ ಆಸ್ಪತ್ರೆ ವೈದ್ಯರ ಹೆಲ್ತ್ ಬುಲೆಟಿನ್
ಮುಂದುವರೆದು ಮಾತನಾಡಿದಂತ ಅವರು, ರಾಬರ್ಟ್ ವಾದ್ರಾ ಮಾಡಿದ್ದ ಹಗರಣಗಳ ಪಟ್ಟಿ ಇದೆ, ನ್ಯಾಷನಲ್ ಹೆರಾಲ್ಡ್ ಹಗರಣ ಗೊತ್ತಿಲ್ಲವೇ, ಹಗರಣವನ್ನೇ ಮಾಡದಂತ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುತ್ತೀರ ಎಂಬುದಾಗಿ ಕಿಡಿಕಾರಿದರು.