ವಿಜಯಪುರ : ರಾಜಕೀಯವಾಗಿ ನನ್ನನ್ನು ಮುಗಿಸಲು ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಮಾತು ಕೇಳಿ ಕೆಲ ಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
BREAKING NEWS : ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ | Actor Lohithaswa
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ನನ್ನನ್ನು ಮುಗಿಸಲು, ಬಿಜೆಪಿ ಪಕ್ಷದ ಸನ್ಮಾನ್ಯ ಉಪಾಧ್ಯಕ್ಷ ವಿಜಯೇಂದ್ರನ ಮಾತು ಕೇಳಿ, ಕೊಟ್ಟ ಪ್ರಸಾದ ಸ್ವೀಕರಿಸಿ, ಕೇಂದ್ರದವರು 2500 ಕೊಟಿ ರೂ.ಕೇಳಿದ್ದಾರೆಂದು ನನ್ನ ಝೀರೋ ಮಾಡುವುದಕ್ಕಾಗಿ ಕೆಲ ದೃಶ್ಯಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು ಎಂದರು.
ದೆಹಲಿಯಿಂದ ಈಗಲೂ ಓರ್ವ ಸ್ವಾಮೀಜಿ1500 ಕೋಟಿ ರೂ. ಕೂಡಿಸಿಕೊಂಡು ದೆಹಲಿ ಬನ್ನಿ. ನಿಮ್ಮನ್ನು ಜೆ.ಪಿ.ನಡ್ಡಾ, ಮೋದಿ ಅವರ ಭೇಟಿಗೆ ಸಮಯ ನಿಗದಿ ಮಾಡುತ್ತೇನೆ ಅಂತೆಲ್ಲ ಹೇಳುತ್ತಾರೆ, ಇಂಥದ್ದನ್ನೆಲ್ಲ ನಂಬಬೇಡಿ ಎಂದಿದ್ದೇನೆ. ಇಂಥವರ ಮಾತು ನಂಬಿಕೊಂಡು ಹಲವರು ಭಾರಿ ಪ್ರಮಾಣದ ಹಣ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.