ಇಟಾವಾ (ಯುಪಿ): ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್(Mulayam Singh Yadav) ಅವರ ಅಂತ್ಯಕ್ರಿಯೆ ಇಂದು ಉತ್ತರ ಪ್ರದೇಶದ ಅವರ ಸ್ವಗ್ರಾಮ ಸೈಫೈನಲ್ಲಿ ನಡೆಯಲಿದೆ.
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದ ಮುಲಾಯಂ ಸಿಂಗ್ ಯಾದವ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಸಂಜೆ ಅವರ ಸ್ವಗ್ರಾಮ ಸೈಫೈಗೆ ತಲುಪಿತು. ಈ ವೇಳೆ ಅವರ ದರ್ಶನಕ್ಕಾಗಿ ಜನ ಸಾಗರವೇ ಹರಿದುಬಂದಿತ್ತು.
ಸೋಮವಾರ ಮುಲಾಯಂ ಸಿಂಗ್ ಯಾದವ್ ಅವರ ದೇಹವು ಜನ್ಮಸ್ಥಳವಾದ ಸೈಫಾಯಿಯನ್ನು ತಲಿಪಿದ್ದು, ಅವರ ದರ್ಶನಕ್ಕಾಗಿ ಜನ ಸಾಗರವೇ ಹರಿದುಬರುತ್ತಿದೆ. ಈ ವೇಳೆ “ನೇತಾಜಿ ಅಮರ್ ರಹೇನ್” ಎಂಬ ಘೋಷಣೆಗಳು ನಿನ್ನೆ ಸೈಫಾಯಿಯಾದ್ಯಂತ ಪ್ರತಿಧ್ವನಿಸಿದವು. ರಾಜ್ಯದ ಉದ್ದಗಲಕ್ಕೂ ಜನರು ಸೋಮವಾರ ಅವರ ಅಂತಿಮ ದರ್ಶನಕ್ಕಾಗಿ ಗ್ರಾಮದಲ್ಲಿ ನೆರೆದಿದ್ದರು.
ಇಂದು ಮಧ್ಯಾಹ್ನ 3 ಗಂಟೆಗೆ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆ ಸೈಫೈನಲ್ಲಿ ನಡೆಯಲಿದೆ.
BIG NEWS : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ : ಇಂದು, ನಾಳೆ ಯೆಲ್ಲೋ ಅಲರ್ಟ್ | Bengaluru Rain