ಗುಜರಾತ್: 3 ದಿನಗಳ ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಸೋಮವಾರ ಗುಜರಾತ್ನ ಜಾಮ್ನಗರದಲ್ಲಿ ಸುಮಾರು 1450 ಕೋಟಿ ರೂಪಾಯಿ ಮೌಲ್ಯದ ನೀರಾವರಿ, ವಿದ್ಯುತ್, ನೀರು ಸರಬರಾಜು ಮತ್ತು ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಿದರು.
ಈ ವೇಳೆ ಜಾಮ್ನಗರದಲ್ಲಿ ಮೋದಿ ಅವರ ಆಗಮನವನ್ನು ವೀಕ್ಷಿಸಲು ನೆರೆದಿದ್ದ ಜನರನ್ನು ನೋಡಿದ ಮೋದಿ ತಮ್ಮ ಕಾರಿನಿಂದ ಕೆಳಗಿಳಿದು ಅಲ್ಲಿದ್ದವರನ್ನು ಮಾತನಾಡಿಸಿದ್ದಾರೆ. ಇದರ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ತಾವು ಬರುವ ಹಾದಿಯಲ್ಲಿ ಅವರಿಗಾಗಿ ಕಾಯುತ್ತಿದ್ದ ಜನರನ್ನು ಕಂಡ ಮೋದಿ ಅವರು ಕಾರಿನಿಂದ ಇಳಿದು ಅಲ್ಲಿದ್ದವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಭಾವಚಿತ್ರವಿರುವ ಪೋಟೋ ನೀಡುತ್ತಾರೆ. ಅದೇ ರೀತಿಯ ಮತ್ತೊಂದು ಭಾವಚಿತ್ರವಿರುವ ಫೋಟೋಗೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನ ಸಮೂಹವು ʻಮೋದಿ ಮೋದಿʼ ಎಂದು ಕೂಗುತ್ತಿರುವುದನ್ನು ಕೇಳಬಹುದು.
#WATCH | PM Narendra Modi got down from his car to accept people’s greetings in Jamnagar, Gujarat earlier this evening. pic.twitter.com/t7iLTOs3eK
— ANI (@ANI) October 10, 2022
BIG NEWS : ʻದ್ವೇಷ ಭಾಷಣಗಳು ಇಡೀ ದೇಶದ ವಾತಾವರಣವನ್ನೇ ಹಾಳು ಮಾಡುತ್ತಿವೆʼ: ಸುಪ್ರೀಂ ಕೋರ್ಟ್
BIGG NEWS : ಅಗ್ನಿಪಥ್ ನೇಮಕಾತಿ ಶಿಬಿರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ