ಕೊಪ್ಪಳ: ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಮಕ್ಕಳ ಉಜ್ವಲ ಭವಿಷ್ಯಕ್ಕೆ ಅನುಕೂಲವಾಗಲಿದ್ದು, ಹೆಣ್ಮಕ್ಕಳು ಶೈಕ್ಷಣಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ ಎಂದು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣನವರು ಹೇಳಿದರು.
SHOCKING NEWS: ಜಾರ್ಖಂಡ್ನಲ್ಲಿ ತಾಯಿಯ ಎದುರೇ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರು ಅರೆಸ್ಟ್
ಭಾರತ ಸರ್ಕಾರದ ಸಂಪರ್ಕ ಸಚಿವಾಲಯ, ಭಾರತೀಯ ಅಂಚೆ ಇಲಾಖೆ ಹಾಗೂ ಗದಗ ಅಂಚೆ ಅಧೀಕ್ಷಕರ ಕಾರ್ಯಾಲಯ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರದಂದು (ಅ.10) ಆಯೋಜಿಸಲಾದ “ಸುಕನ್ಯಾ ಸಮೃದ್ಧಿ ಮಹೋತ್ಸವ” ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯೂ ಸುಕನ್ಯಾ ಸಮೃದ್ಧಿ ಯೋಜನೆ ಮಹೋತ್ಸವ ಎಂಬ ಸಮಾರಂಭವನ್ನು ಆಚರಿಸಿರುವುದು ಸಂತಸದ ವಿಷಯ. ಈ ಅಂಗವಾಗಿ ದೇಶದ 75 ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ ರಾಜ್ಯದ ಐದು ನಗರಗಳಲ್ಲಿ ನಮ್ಮ ಕೊಪ್ಪಳ ಜಿಲ್ಲೆಯೂ ಆಯ್ಕೆಯಾಗಿದ್ದು, ಹೆಮ್ಮೆಯ ಸಂಗತಿ. ಈ ಯೋಜನೆ ಎಲ್ಲಾ ಹೆಣ್ಣುಮಕ್ಕಳ ಭವಿಷ್ಯ ಉಜ್ವಲವಾಗಲು ತುಂಬಾ ಸಹಕಾರಿಯಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯನ್ನು ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಯವರು ಜಾರಿಗೆ ತಂದಿದ್ದು, ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಗೆ ಸುಕನ್ಯಾ ಸಮೃದ್ಧಿ ಯೋಜನೆ ಪೂರಕವಾಗಿದೆ ಎಂದರು.
BIG NEWS : ಉಕ್ರೇನ್ ಮೇಲೆ 84 ಕ್ಷಿಪಣಿಗಳನ್ನು ಉಡಾಯಿಸಿದ ರಷ್ಯಾ: 10 ಮಂದಿ ಸಾವು, ಹಲವರಿಗೆ ಗಾಯ
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಪ್ರೋತ್ಸಾಹಿಕವಾಗಿ ನಮ್ಮ ಕೊಪ್ಪಳದಲ್ಲಿ ಹಲವು ಪ್ರಾಯೋಜಕರು ನೀಡಿದ ದೇಣಿಗೆ ಫಲವಾಗಿ ಸುಮಾರು 5290 ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳನ್ನು ನೋಂದಣಿ ಮಾಡಲಾಗಿದೆ. ರಾಜ್ಯದಲ್ಲಿಯೇ ಕೊಪ್ಪಳ ಹೆಚ್ಚು ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆದ ಕೀರ್ತಿಗೆ ಪಾತ್ರವಾಗಿದ್ದಲದೇ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆ ಒಂದಾಗಿದೆ. ಇದರ ಅನುಕೂಲವನ್ನು ಎಲ್ಲಾ ಹೆಣ್ಣುಮಕ್ಕಳು ಮತ್ತು ಅವರ ತಂದೆತಾಯಿಗಳು ಪಡೆದುಕೊಳ್ಳಬೇಕು. ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಹೆಣ್ಣುಮಕ್ಕಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸದೃಢವಾಗಲು ಸಹಾಯಕವಾಗಿದೆ. ಕೊಪ್ಪಳ ಜಿಲ್ಲೆಗೆ ವಿಭಾಗೀಯ ಅಂಚೆ ಕಛೇರಿಯನ್ನು ತೆರೆಯಲು ಅಂಚೆ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದರು.