ನವದೆಹಲಿ : ಅಕ್ರಮ ಗಣಿ ಹಗರಣ ಪ್ರಕರಣ ಎದುರಿಸುತ್ತಿರುವ ಗಣಿಧಣಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿಗೆ ಹೋಗಲು ಅವಕಾಶ ಕೊಡಿ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಬಳ್ಳಾರಿಗೆ ತೆರಳಲು ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಗಳ ಹೆರಿಗೆ ಹಿನ್ನೆಲೆ 1 ತಿಂಗಳು ಮಾತ್ರ ತೆರಳಲು ಅನುಮತಿಯನ್ನು ಸುಪ್ರೀಂಕೋರ್ಟ್ ನೀಡಲಾಗಿದೆ.
BIGG NEWS :ʻ ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್ ವ್ಯಂಗ್ಯ
ಅಕ್ರಮ ಗಣಿ ಹಗರಣ ಪ್ರಕರಣ ಎದುರಿಸುತ್ತಿರುವ ಗಣಿಧಣಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿಗೆ ಹೋಗಲು ಅವಕಾಶ ಕೊಡಿ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು ಕೋರ್ಟ್ ಗೆ ಮನವಿ ಮಾಡಿರುವ ‘ಗಾಲಿ ಜನಾರ್ಧನ ರೆಡ್ಡಿ’ಕೆಲವು ದಿನಗಳಲ್ಲೇ ತನ್ನ ಮಗಳಿಗೆ ಹೆರಿಗೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಒಂದು ತಿಂಗಳಾದರೂ ತನಗೆ ಬಳ್ಳಾರಿಗೆ ಹೋಗಲು ಅನುಮತಿ ನೀಡುವಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು
BIGG NEWS :ʻ ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್ ವ್ಯಂಗ್ಯ
ಸಿಬಿಐ ಎರಡು ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ನ್ಯಾ. ಎಂಆರ್.ಶಾ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಇಂದು ಶುಕ್ರವಾರ ವಿಚಾರಣೆ ನಡೆಸಿತ್ತು.
ಬಹುಕೋಟಿ ಗಣಿ ಹಗರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಕಡಪಾ ಮತ್ತು ಅನಂತಪುರ ಜಿಲ್ಲೆಗಳಿಗೆ ಪ್ರವೇಶಿಸದಂತೆ ಕಠಿಣ ನಿರ್ಬಂಧ ಹೇರಿತ್ತು, ಈ ಹಿನ್ನೆಲೆ ಗಾಲಿ ಜನಾರ್ಧನ ರೆಡ್ಡಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದರು
BIGG NEWS :ʻ ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್ ವ್ಯಂಗ್ಯ
ಇದೀಗ ಮಗಳ ಹೆರಿಗೆ ಹಿನ್ನೆಲೆ 1 ತಿಂಗಳ ಕಾಲ ಮಾತ್ರ ಬಳ್ಳಾರಿಗೆ ತೆರಳಲು ತೆರಳಲು ಅನುಮತಿ ಸುಪ್ರೀಂ ಕೋರ್ಟ್ ನೀಡಲಾಗಿದೆ.