ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕಬಡ್ಡಿ ಆಡುವಾಗ ಚಡ್ಡಿ ಧರಿಸಿ ಕಬಡ್ಡಿ ಆಡುವುದು ಸಾಮಾನ್ಯ..ಆದರೆ ಛತ್ತೀಸ್ಗಡ ಗ್ರಾಮವೊಂದರಲ್ಲಿಹಳ್ಳಿಯ ಮಹಿಳಾ ಮಣಿಗಳು ಸೀರೆಯುಟ್ಟ ಕಬಡ್ಡಿ ಆಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಗ್ರಾಮದಲ್ಲೇ ತಾತ್ಕಾಲಿಕ ಕಬಡ್ಡಿ ಮೈದಾನ ನಿರ್ಮಿಸಿಕೊಂಡು ಎರಡು ತಂಡಗಳ ಮಹಿಳೆಯರು ಉತ್ಸಾಹದಿಂದ ಕಬಡ್ಡಿ ಆಡುವುದನ್ನು ನೂರಾರು ಜನರು ವೀಕ್ಷಿಸುವ ವಿಡಿಯೋ ಅನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
हम किसी से कम हैं क्या !!!
छत्तीसगढ़िया ओलंपिक में महिला कबड्डी. pic.twitter.com/06QyhY4ojp
— Awanish Sharan (@AwanishSharan) October 7, 2022
ವಿಡಿಯೋ ಅನ್ನು ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 12,500ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಗ್ರಾಮೀಣ ಮಹಿಳೆಯರ ಉತ್ಸಾಹವನ್ನು ಪ್ರಶಂಸಿಸಿ ಕಾಮೆಂಟ್ ಮಾಡಿದ್ದಾರೆ.