ನವದೆಹಲಿ: ಭಾರತದಲ್ಲಿ ಎಫ್ಎಂಸಿಜಿ ಸಂಸ್ಥೆಗಳಾದ ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ ಮತ್ತು ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಜಿಸಿಪಿಎಲ್) ಕಂಪನಿಗಳಿಗೆ ಸಂಬಂಧಿಸಿದ ಕೆಲವು ಸಾಬೂನುಗಳ ಬೆಲೆಯನ್ನು ಶೇಕಡಾ 15 ರಷ್ಟು ಕಡಿಮೆ ಮಾಡಿದೆ.
ದೇಶದಲ್ಲಿ ತಾಳೆ ಎಣ್ಣೆ ಮತ್ತು ಇತರ ಕಚ್ಚಾ ಸಾಮಗ್ರಿಗಳು ತುಲನಾತ್ಮಕವಾಗಿ ಅಗ್ಗವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಾಬೂನು ಬ್ರಾಂಡ್ಗಳ ಬೆಲೆಯನ್ನು ಶೇಕಡಾ 15 ರಷ್ಟು ಕಡಿತಗೊಳಿಸಿವೆ. ಹೀಗಾಗಿ, HUL ತನ್ನ ಜನಪ್ರಿಯ ಸೋಪ್ ಬ್ರ್ಯಾಂಡ್ಗಳಾದ ಲೈಫ್ಬಾಯ್ ಮತ್ತು ಲಕ್ಸ್ ಸೋಪಿನ ಬೆಲೆಗಳನ್ನು ಪಶ್ಚಿಮ ಪ್ರದೇಶದಲ್ಲಿ 5 ರಿಂದ 11 ಪ್ರತಿಶತದಷ್ಟು ಕಡಿಮೆ ಮಾಡಿದೆ. ಸೋಪ್ ಬ್ರ್ಯಾಂಡ್ ಗೋದ್ರೇಜ್ ನಂ 1 ಅನ್ನು ಹೊಂದಿರುವ ಗೋದ್ರೇಜ್ ಗ್ರೂಪ್ ಆರ್ಮ್ ಜಿಸಿಪಿಎಲ್ ಸಹ ಸಾಬೂನುಗಳ ಬೆಲೆಯನ್ನು ಶೇಕಡಾ 13 ರಿಂದ 15 ರಷ್ಟು ಕಡಿಮೆ ಮಾಡಿದೆ.
ಬೆಲೆಗಳಲ್ಲಿನ ಕಡಿತವು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ತಾಳೆ ಎಣ್ಣೆ ಮತ್ತು ಇತರ ಕಚ್ಚಾ ವಸ್ತುಗಳ ಜಾಗತಿಕ ಬೆಲೆಯಲ್ಲಿ ಇಳಿಕೆಯಾಗಿರುವುದು ಬೆಲೆ ಇಳಿಕೆಗೆ ಒಂದು ಕಾರಣ ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ GCPL CFO ಸಮೀರ್ ಷಾ, “ಸರಕು ಬೆಲೆಗಳು ಕಡಿಮೆಯಾಗುತ್ತಿರುವುದರಿಂದ, ಗ್ರಾಹಕರಿಗೆ ಬೆಲೆ ಕಡಿತದ ಲಾಭವನ್ನು ವರ್ಗಾಯಿಸುವ FMCG ಕಂಪನಿಗಳಲ್ಲಿ GCPL ಒಂದಾಗಿದೆ. ನಿರ್ದಿಷ್ಟವಾಗಿ ಸಾಬೂನುಗಳಿಗೆ GCPL ಶೇಕಡಾ 13 ರಿಂದ 15 ರಷ್ಟು ಬೆಲೆಗಳನ್ನು ಕಡಿಮೆ ಮಾಡಿದೆ. ನಾವು ಗೋದ್ರೇಜ್ ನಂ.1 ಸೋಪಿನ ಬಂಡಲ್ ಪ್ಯಾಕ್ (ತಲಾ 100 ಗ್ರಾಂನ ಐದು ಘಟಕಗಳು) ಬೆಲೆಯನ್ನು 140 ರಿಂದ 120 ಕ್ಕೆ ಇಳಿಸಿದ್ದೇವೆ” ಎಂದು ಹೇಳಿದ್ದಾರೆ.
“ಲೈಫ್ಬಾಯ್ ಮತ್ತು ಲಕ್ಸ್ಗೆ ಸಂಬಂಧಿಸಿದ ಸೋಪಿನ ಬೆಲೆಯು ಪಶ್ಚಿಮ ಪ್ರದೇಶದಲ್ಲಿ ಬೆಲೆ ಇಳಿಕೆಯಾಗಿದೆ. ಇತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಕಡಿತವನ್ನು ಮಾಡಲಾಗುತ್ತದೆ ಎಂದು ಎಚ್ಯುಎಲ್ ವಕ್ತಾರರು ಮಾಹಿತಿ ನೀಡಿದ್ದಾರೆ. ಆದ್ರೆ, ಎಷ್ಟು ಪ್ರಮಾಣದಲ್ಲಿ ಬೆಲೆ ಕಡಿತಗೊಳಿಸಲಾಗುವುದು ಎಂಬುದರ ಬಗ್ಗೆ ಅವರು ತಿಳಿಸಿಲ್ಲ. ಆದಾಗ್ಯೂ, ವರದಿಗಳ ಪ್ರಕಾರ, ಈ ಸೋಪ್ ಬ್ರಾಂಡ್ಗಳ ಬೆಲೆಗಳನ್ನು ಶೇಕಡಾ 5-11 ರಷ್ಟು ಕಡಿಮೆ ಮಾಡಲಾಗಿದೆ.
ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ : ಮಾಜಿ ಸಿಎಂ ಬಿಎಸ್ವೈ