ಚೆನ್ನೈ: ಚೆನ್ನೈನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮತ್ತು ಆಕೆಯ ಮಗು ಸಾವನ್ನಪ್ಪಿದೆ. ಮುಂಜಾನೆ ಅಮಾಂಜಿಕರೈ, ಅಣ್ಣಾ ಆರ್ಚ್ ಬಳಿ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ತಾಯಿ, ಮಗು ರಸ್ತೆ ದಾಟುತ್ತಿದ್ದಾಗ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಪುಂಗುಝಾಲಿ(28) ಎಂದು ಗುರುತಿಸಲಾಗಿದೆ.
ಮಹಿಳೆ ಮತ್ತು ಆಕೆಯ ಮಗು ಗಾಯಗೊಂಡು ಸಾವನ್ನಪ್ಪಿದ್ದು, ಬೈಕ್ ಸವಾರ ಕುಡಿದಿದ್ದ ಅಮಲಿನಲ್ಲಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಕಾರಣವಾದ ದಂಪತಿಯನ್ನು ಚೆನ್ನೈ ಪೊಲೀಸರು ಬಂಧಿಸಿ ವಿಚಾರಣೆಗಾಗಿ ಕೆ 4 ಪೊಲೀಸ್ ಠಾಣೆಗೆ ಕರೆದೊಯ್ದರು. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
BIGG BREAKING NEWS : ಪುನೀತ್ ರಾಜ್ ಕುಮಾರ್ `ಗಂಧದ ಗುಡಿ’ ಟ್ರೈಲರ್ ರಿಲೀಸ್ : ಪ್ರಧಾನಿ ಮೋದಿ ಶುಭ ಹಾರೈಕೆ