ಕೆಎನ್ಎನ್ ಡಿಜಿಟಲ್ ಡೆಸ್ಕ್ : ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್ಮ್ಯಾನ್ ಡೇವಿಡ್ ಮಿಲ್ಲರ್ ತನ್ನ ಪುತ್ರಿಯನ್ನು ಕಳೆದುಕೊಂಡಿದ್ದಾರೆ.
BREAKING NEWS : ಉತ್ತರ ಪ್ರದೇಶದಲ್ಲಿ ಘೋರ ದುರಂತ: ಮೆರವಣಿಗೆ ವೇಳೆ ಹೈ-ಟೆನ್ಷನ್ ತಂತಿ ಸ್ಪರ್ಶಸಿ 5 ಮಂದಿ ಸಾವು
ಹಲವು ವರ್ಷಗಳಿಂದ ಮಿಲ್ಲರ್ ಪುತ್ರಿ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದೀಗ ಡೇವಿಡ್ ಮಿಲ್ಲರ್ ಭಾರತದಲ್ಲಿ ಏಕದಿನ ಸರಣಿ ಆಡುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಮಗಳು ಮೃತಪಟ್ಟಿರುವ ಸುದ್ದಿ ಆಫಾತ ತರಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪುತ್ರಿಯ ಸಾವಿನ ಕುರಿತಂತೆ ದುಃಖ ವ್ಯಕ್ತಪಡಿಸಿರುವ ಮಿಲ್ಲರ್, ನನ್ನ ಪುಟ್ಟ ರಾಜಕುಮಾರಿಯನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ಜೀವನದಲ್ಲಿ ಹಲವು ಕಷ್ಟದ ಹಾದಿಯನ್ನು ಎದುರಿಸಿ ನಗುತ್ತ ಇದ್ದಳು. ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಐ ಲವ್ ಯೂ. ರಿಪ್ ಎಂದು ಬರೆದುಕೊಂಡು ಮಿಲ್ಲರ್ ಮಗಳೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
ಭಾರತ ವಿರುದ್ಧ ಸರಣಿಗಾಗಿ ಮಿಲ್ಲರ್ ಭಾರತಕ್ಕೆ ಆಗಮಿಸಿದ್ದು, ಈಗಾಗಲೇ ನಡೆದಿರುವ ಟಿ20 (T20) ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಏಕದಿನ ಸರಣಿಯಲ್ಲೂ ಉತ್ತಮ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿರುವ ಮಿಲ್ಲರ್ಗೆ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಆಫಾತವಾಗಿದೆ. ಇಂದು ರಾಂಚಿಯಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಮಗಳನ್ನು ಕಳೆದುಕೊಂಡ ನೋವಿನ ಮಧ್ಯೆ ಮಿಲ್ಲರ್ ತಂಡದೊಂದಿಗಿದ್ದಾರೆ.
ಮೊದಲ ಪಂದ್ಯದಲ್ಲಿ ಆತಿಥೇಯರನ್ನು 9 ರನ್ಗಳಿಂದ ಸೋಲಿಸಿದ ಟೆಂಬಾ ಬವುಮಾ ಅವರ ತಂಡವು ಪ್ರಸ್ತುತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
BIGG BREAKING NEWS : ಪುನೀತ್ ರಾಜ್ ಕುಮಾರ್ `ಗಂಧದ ಗುಡಿ’ ಟ್ರೈಲರ್ ರಿಲೀಸ್ : ಪ್ರಧಾನಿ ಮೋದಿ ಶುಭ ಹಾರೈಕೆ