ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೆರವಣಿಗೆ ವೇಳೆ ಭಾಗವಹಿಸಿದ್ದ ವೇಳೆ ಈ ಅವಘಡ ನಡೆದಿದೆ.
ಮೆರವಣಿಗೆಯ ಗಾಡಿಗೆ ಅಳವಡಿಸಲಾಗಿದ್ದ ಹೈಟೆನ್ಷನ್ ತಂತಿಯ ಕಬ್ಬಿಣದ ರಾಡ್ಗೆ ವ್ಯಕ್ತಿಗಳು ಸ್ಪರ್ಶಿಸಿದ ನಂತರ ಈ ಘಟನೆ ನಡೆದಿದೆ. ಐವರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ಸಾಗಿಸಲ್ಟಟ್ಟ ಮತ್ತೊಬ್ಬ ವ್ಯಕ್ತಿ ಮಾರ್ಗಮಧ್ಯ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಹ್ರೈಚ್ನಲ್ಲಿ ನಡೆದ ಮೆರವಣಿಗೆಯಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಇದರೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಆಗಮಿಸುವಂತೆ ಸೂಚನೆ ನೀಡಿದರು.
BIGG NEWS : `CET’ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ : ನಾಳೆ ಸೀಟು ವಿವರ ಪ್ರಕಟ