ಬೆಂಗಳೂರು : ಇಂಜಿನಿಯರಿಂಗ್ ಸೇರಬಯಸುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಸಿಹಿಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನ ಇಂಜಿನಿಯರಿಂಗ್ ಕೋರ್ಸ್ ನಲ್ಲಿ 908 ಸೀಟು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಸಕ್ತ ಸಾಲಿನ ಇಂಜಿನಿಯರಿಂಗ್ ಕೋರ್ಸ್ ನಲ್ಇ 908 ಸೀಟು ಹೆಚ್ಚಳ ಮಾಡಲಾಗಿದ್ದು, ಬೇಡಿಕೆ ಕೋರ್ಸ್ ಆದ ಕಂಪ್ಯೂಟರ್ ಸೈನ್ಸ್ ನಲ್ಲಿ ಶೇ. 25 ರಷ್ಟು ಸೀಟು ಹೆಚ್ಚು ಸಿಗಲಿವೆ. 2021-22 ರಲ್ಲಿ ಸರ್ಕಾರಿ,ಅನುದಾನಿತ, ಅಲ್ಪಸಂಖ್ಯಾತ ಹಾಗೂ ಖಾಸಗಿ ವಿವಿಗಳಲ್ಲಿ ಒಟ್ಟಾರೆ 56,947 ಸೀಟು ಲಭ್ಯವಿದ್ದವು 2022-23 ರಲ್ಲಿ 57,855 ಸೀಟು ಲಭ್ಯವಿವೆ. ಒಟ್ಟಾರೆ 908 ಸೀಟುಗಳು ಹೆಚ್ಚಳವಾಗಿವೆ ಎಂದು ಹೇಳಿದ್ದಾರೆ.
ಇನ್ನೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಈ ವರ್ಷ 18 ರಿಂದ 22 ಕ್ಕೆ ಏರಿಕೆಯಾಗಿದೆ ಹೀಗಾಗಿ ಸರ್ಕಾರಿ ಕಾಲೇಜುಗಳಲ್ಲಿ ಇದ್ದ 4841 ಸೀಟುಗಳಿಂದ 5397 ಕ್ಕೆ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ.