ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉತ್ತರ ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ಪ್ರಾಂತ್ಯಗಳನ್ನು ಸಂಪರ್ಕಿಸುವ ರಸ್ತೆಯನ್ನು ತಡೆದ ಉಗ್ರರು ಸಚಿವರೊಬ್ಬರನ್ನು ಹಾಗೂ ಹಲವು ಮಂದಿ ಪ್ರವಾಸಿಗರನ್ನು ಅಪಹರಿಸಿದ್ದಾರೆ ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ.
ಜೈಲಿನಲ್ಲಿರುವ ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿರುವ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ ನಂತರ ಸಚಿವರು ಮತ್ತು ಪ್ರವಾಸಿಗರನ್ನು ಶನಿವಾರ ಬಿಡುಗಡೆ ಮಾಡಲಾಯಿತು, ಅಪಹರಣಕ್ಕೊಳಗಾದ ಸಚಿವ ಅಬೈದುಲ್ಲಾ ಬೇಗ್ ಬಿಡುಗಡೆ ಮಾಡಿದ ವಿಡಿಯೋ ಕ್ಲಿಪ್ ಅನ್ನು ತೋರಿಸಿದರು.
ಸಂಧಾನ ಮಾತುಕತೆಯ ಬಳಿಕ ಭಯೋತ್ಪಾದಕರು, ಗಿಲ್ಗಿಟ್– ಬಾಲ್ಟಿಸ್ತಾನದ ಸಚಿವ ಅಬೈದುಲ್ಲಾ ಬೇಗ್ ಹಾಗೂ ಪ್ರವಾಸಿಗರನ್ನು ಬಿಡುಗಡೆ ಮಾಡಿದ್ದಾರೆ ಎಂದೂ ಹೇಳಿವೆ.
ನಂಗಾ ಪರ್ಬತ್ನಲ್ಲಿ ವಿದೇಶಿಯರನ್ನು ಹತ್ಯೆ ಮಾಡಿರುವ ಮತ್ತು ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವ ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಅಪಹರಣಕಾರರು ಬೇಡಿಕೆ ಮುಂದಿಟ್ಟಿದ್ದರು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ಬೇಡಿಕೆಯನ್ನು ಈಡೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದೂ ಹೇಳಿವೆ.
ಇಸ್ಲಾಮಾಬಾದ್ನಿಂದ ಗಿಲ್ಗಿಟ್ಗೆ ತೆರಳುತ್ತಿದ್ದ ವೇಳೆ ಉಗ್ರರು ತಮ್ಮನ್ನು ಅಪಹರಿಸಿದ್ದಾರೆ ಎಂದು ಬಿಡುಗಡೆಯಾದ ಬಳಿಕ ಸಚಿವರು ತಿಳಿಸಿದ್ದಾರೆ.
ನಂಗಾ ಪರ್ಬತ್ನಲ್ಲಿ 10 ಮಂದಿ ವಿದೇಶಿಯರನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಉಗ್ರ ಹಬೀಬುರ್ ರೆಹಮಾನ್ ಮತ್ತು ಆತನ ಸಹಚರರು ಈ ಕೃತ್ಯ ನಡೆಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಮೂಲಗಳ ಪ್ರಕಾರ, ನಂಗಾ ಪರ್ಬತ್ ಪ್ರದೇಶದಲ್ಲಿ ವಿದೇಶಿಯರ ಭೀಕರ ಹತ್ಯೆ ಮತ್ತು ಡೈಮರ್ನಲ್ಲಿನ ಇತರ ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿರುವವರು ಸೇರಿದಂತೆ ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಉಗ್ರರು ಒತ್ತಾಯಿಸುತ್ತಿದ್ದರು. ಈ ಪ್ರಾಂತ್ಯದಲ್ಲಿ ಯಾವುದೇ ಮಹಿಳಾ ಕ್ರೀಡಾ ಚಟುವಟಿಕೆಗಳಿಲ್ಲದ ಇಸ್ಲಾಮಿಕ್ ಕಾನೂನುಗಳನ್ನು ಹೇರುವಂತೆಯೂ ಉಗ್ರಗಾಮಿಗಳು ಒತ್ತಾಯಿಸಿದ್ದಾರೆ.
ಸಚಿವರು ಉಗ್ರಗಾಮಿ ವಶದಲ್ಲಿರುವಾಗ, ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರದ ಮಾಜಿ ವಕ್ತಾರ ಫೈಜುಲ್ಲಾ ಅವರು ಅಬೈದ್ ಉಲ್ಲಾ ಬೇಗ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಅವರ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಗಿಲ್ಗಿಟ್-ಬಾಲ್ಟಿಸ್ತಾನ್ನ ಬಾಬುಸರ್ ರಸ್ತೆಯಿಂದ ಅಪಹರಣಕ್ಕೊಳಗಾದ ಬೇಗ್ ಮನೆಗೆ ತಲುಪಿದ್ದಾರೆ ಎಂದು ಪಾಕಿಸ್ತಾನದ ಪ್ರಸಾರ ಸಂಸ್ಥೆ ಜಿಯೋ ಟಿವಿ ವರದಿ ಮಾಡಿದೆ.