ಚಿಕ್ಕಮಗಳೂರು: ತಾಲೂಕಿನ ವಿವಾದಿತ ಸ್ಥಳವಾದ ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಹಾರ ಸೇವಿಸಿರುವ ಆರೋಪ ಕೇಳಿಬಂದಿದೆ .
ದತ್ತಪೀಠದ ಹೋಮ-ಹವನ ನಡೆಯುವ ತಾತ್ಕಾಲಿಕ ಶೆಡ್ನಲ್ಲಿ ಮಾಂಸಹಾರ ಸೇವನೆಯು ನಡೆಯುತ್ತಿದೆ ಎನ್ನಲಾಗಿದೆ. ಹೋಮ ಹವನ ನಡೆಯುವ ಸ್ಥಳದಲ್ಲಿ ಮಾಂಸದೂಟ ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೋಮಕ್ಕೆಂದು ನಿರ್ಮಿಸಿದ ಶೆಡ್ ನಲ್ಲಿ ಮಾಂಸಹಾರ ಸೇವನೆ ಮಾಡಲಾಗಿದ್ದು, ಕಳೆದ 6 ತಿಂಗಳ ಹಿಂದೆ ಬಿರಿಯಾನಿ ಪಾರ್ಟಿ ಮಾಡಲಾಗಿತ್ತು. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಯಶವಂತಪುರ- ಮಾರಮ್ಮ ಸರ್ಕಲ್ ವೈಟ್ ಟಾಪಿಂಗ್ ಕಾಮಗಾರಿ: ನ.1ರೊಳಗೆ ಮುಗಿಸಲು ಸಚಿವ ಅಶ್ವತ್ಥನಾರಾಯಣ ಸೂಚನೆ